ಬೆಂಗಳೂರು: ಕೋವಿಡ್ 19 ನಿಯಂತ್ರಣದ ಜೊತೆಗೆ ಕೊರೊನಾ ವಾರಿಯರ್ಸ್ ರಕ್ಷಣೆಗೆ ಸರ್ಕಾರ ಮೆಗಾ ಪ್ಲಾನ್ ಮಾಡಿಕೊಂಡಿದ್ದು, ರಾಜಧಾನಿಗೆ ಯಂತ್ರ ಮಾನವರು ಎಂಟ್ರಿ ಕೊಡಲಿದ್ದಾರೆ.
ಹೌದು. ಕೋವಿಡ್ ಕೇರ್ ಸೆಂಟರ್‌ಗೆ ಯಂತ್ರ ಮಾನವರನ್ನು ಕರೆ ತರಲು ಸರ್ಕಾರ ನಿರ್ಧಾರ ಮಾಡಿದೆ. ಬೆಂಗಳೂರಿನ ಬೃಹತ್ ಕೊರೊನಾ ಕೇರ್ ಸೆಂಟರ್ ಆಗಲಿರುವ ಅಂತರಾಷ್ಟ್ರೀಯ ವಸ್ತು ಪ್ರದರ್ಶನದ ಕೇಂದ್ರದಲ್ಲಿ ರೊಬೊಟ್ ಬಳಕೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
Advertisement
Advertisement
ಮೊದಲ ಹಂತವಾಗಿ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕೊರೊನಾ ವಾರಿಯರ್ ಆಗಿ 4 ರೊಬೊಟ್ ಬಳಕೆಗೆ ನಿರ್ಧಾರ ಮಾಡಲಾಗಿದೆ. ಚಿಕಿತ್ಸೆ ಪಡೆಯಯವವರ ಯೋಗ ಕ್ಷೇಮ ವಿಚಾರಿಸಲು ಯಂತ್ರ ಮಾನವನ ಬಳಕೆ ಮಾಡಲಾಗುತ್ತದೆ.
Advertisement
ಪ್ರತಿ ವಾರ್ಡ್ ಗಳಿಗೆ ಹೋಗಿ ಚಿಕಿತ್ಸೆ ಪಡೆಯುವವರ ಯೋಗ ಕ್ಷೇಮವನ್ನು ರೊಬೋ ವಿಚಾರಿಸಲಿದೆ. ಆರಂಭದಲ್ಲಿ ನಾಲ್ಕು ರೋಬೋ ಖರೀದಿಸುವ ಬಗ್ಗೆ ಸರ್ಕಾರದ ತೀರ್ಮಾನ ಕೈಗೊಂಡಿದೆ.
Advertisement
ಈಗಾಗಲೇ ಜಯದೇವದಲ್ಲಿ ಪ್ರಯೋಗಿಕ ಪರೀಕ್ಷೆ ನಡೆಸಲಾಗಿದೆ. ಒಂದು ರೊಬೊಟ್ ಗೆ 10-11 ಲಕ್ಷ ರೂ. ವೆಚ್ಚವಾಗುತ್ತದೆ. ಒಂದು ರೊಬೊಟ್ 200 ಜನ ರೋಗಿಗಳಿಗೆ ಬಳಸಬಹುದು. ಬಾಡಿಗೆಗೂ ಈ ರೊಬಾಟ್ ಸಿಗುತ್ತದೆ.
ಅಪ್ಲಿಕೇಶನ್ ಮೂಲಕ ಕಾರ್ಯನಿರ್ವಹಿಸುವ ಈ ರೊಬೊಟ್ ರೋಗಿಗಳ ಜೊತೆ ಮಾನವ ಸಂಪರ್ಕವನ್ನು ಕಡಿಮೆ ಮಾಡುತ್ತದೆ. ರೋಗಿ ಹೇಗಿದ್ದಾರೆ ಎನ್ನುವುದನ್ನು ರೊಬೊ ಮೂಲಕ ಗುರುತಿಸಬಹುದು.
ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10 ಸಾವಿರ ರೋಗಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಈ ಕೇಂದ್ರಕ್ಕೆ ಭಾರೀ ಸಂಖ್ಯೆಯಲ್ಲಿ ಆರೋಗ್ಯ ಸಿಬ್ಬಂದಿಯ ಅಗತ್ಯ ಇರುವ ಕಾರಣ ಸರ್ಕಾರ ರೊಬೊಟ್ ಇಳಿಸಲು ಮುಂದಾಗಿದೆ.