ಬೆಂಗಳೂರು: ಸದ್ಯದಲ್ಲೇ ಕೊರೋನಾ ಲಸಿಕೆಯ ಗುಡ್‍ನ್ಯೂಸ್ ಸಿಗುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕೋರೋನಾ ಲಸಿಕೆ ಹಂಚಿಕೆ, ಸುರಕ್ಷಿತ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈಗಾಗಲೇ ಲಸಿಕೆ ವಿತರಿಸಲು ಮಾಡಿಕೊಂಡಿರುವ ವ್ಯವಸ್ಥೆಗಳ ಕುರಿತು ಅಂಕಿ ಅಂಶ ಸಮೇತ ಕೇಂದ್ರಕ್ಕೆ ಮಾಹಿತಿ ನೀಡಿದೆ. ಸಾರ್ವಜನಿಕರಿಗೆ ಕೊರೋನಾ ಲಸಿಕೆ ನೀಡಲು ರಾಜ್ಯ ರೆಡಿ ಇದೆ ಎಂಬ ಸಂದೇಶ ರವಾನಿಸಿದೆ.
Advertisement
Advertisement
ಈಗಾಗಲೇ ಲಸಿಕೆ ಸ್ಟೋರೇಜ್‍ಗೆ ಬೆಂಗಳೂರಿನ ದಾಸಪ್ಪ ಆಸ್ಪತ್ರೆ, ಬಾಗಲಕೋಟೆಯ ಜಿಲ್ಲಾಸ್ಪತ್ರೆ ಸೇರಿದಂತೆ ರಾಜ್ಯದ ಎಲ್ಲಾ ಜಿಲಾಸ್ಪತ್ರೆಗಳಲ್ಲಿ ಲಸಿಕೆಯನ್ನು ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
Advertisement
ಬೆಂಗಳೂರಿನ ಟೌನ್ ಹಾಲ್ ಬಳಿ ಇರುವ ದಾಸಪ್ಪ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಯ ಸಂಗ್ರಹಕ್ಕೆ ಶೈತ್ಯಾಗಾರ ವ್ಯವಸ್ಥೆ ಮತ್ತು ಲಸಿಕೆ ರವಾನೆಗೆ ಅಗತ್ಯ ಇರುವ ವ್ಯಾಕ್ಸಿನ್ ವ್ಯಾನ್‍ಗಳನ್ನು ಸಜ್ಜಾಗಿ ಇಡಲಾಗಿದೆ. ಭದ್ರತಾ ದೃಷ್ಟಿಯಿಂದ ಕೋಲ್ಡ್ ಸ್ಟೋರೇಜ್ ಇರುವ ಕಟ್ಟಡದ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನೂ ಓದಿ: 3-4 ತಿಂಗಳಿನಲ್ಲಿ ಲಸಿಕೆ ಲಭ್ಯ, ನನಗೆ ವಿಶ್ವಾಸವಿದೆ – ಹರ್ಷವರ್ಧನ್
Advertisement
ಸಿದ್ಧತೆ ಏನು?
* ರಾಜ್ಯದ ಎರಡು ಕಡೆ ಬೃಹತ್ ಫ್ರೀಜರ್‌ಗಳ ವ್ಯವಸ್ಥೆ (ಸಜ್ಜುಗೊಳಿಸಲಾಗ್ತಿದೆ)
* ರಾಜ್ಯದಲ್ಲಿರುವ ಬೃಹತ್ ಕೋಲ್ಡ್ ಸ್ಟೋರೇಜ್ – 10
* ರಾಜ್ಯದಲ್ಲಿರುವ ಕೋಲ್ಡ್ ಬಾಕ್ಸ್ – 3426
* ವ್ಯಾಕ್ಸಿನ್ ಕ್ಯಾರಿಯರ್ ಬಾಕ್ಸ್ – 55,347
* ಬಳಕೆಯಲ್ಲಿರುವ ಸ್ಟೆಬಿಲೈಜರ್ ಸಂಖ್ಯೆ – 6144
* ಬೆಂಗಳೂರಿನ 84 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋಲ್ಡ್ ಸ್ಟೋರೇಜ್ ಯೂನಿಟ್
* ಬಿಬಿಎಂಪಿ ಬಳಿ 175 ರೆಫ್ರಿಜರೇಟರ್, 150 ಡೀಪ್ ಫ್ರೀಜರ್
* ಬೆಂಗಳೂರಿನ 94 ಸಾವಿರ ಕೋರೋನಾ ವಾರಿಯರ್ಸ್‍ಗೆ ಮೊದಲು ಲಸಿಕೆ
* ಉಚಿತವಾಗಿ ಕೊರೋನಾ ಲಸಿಕೆ ಹಂಚಿಕೆ