ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ದೋಷ ಇದ್ಯಾ? – ಕೆಲ ನಿಮಿಷದಲ್ಲಿ ಸರಿ ಮಾಡಿ

Public TV
1 Min Read
FotoJet 9 2

ನವದೆಹಲಿ: ಕೊರೊನಾ ಲಸಿಕೆ ಸ್ವೀಕರಿಸಿದವರಿಗೆ ಆನ್‍ಲೈನ್ ಮೂಲಕ ನೀಡುವ ಪ್ರಮಾಣ ಪತ್ರದಲ್ಲಿ ಯಾವುದೇ ದೋಷವಾಗಿದ್ದರೆ ಅದನ್ನು ಈಗ ಸರಿ ಮಾಡಬಹುದು.

ಜನ್ಮ ವರ್ಷ, ಹೆಸರು, ಲಿಂಗದಲ್ಲಿ ಆಗಿರುವ ತಪ್ಪುಗಳನ್ನು ಬಳಕೆದಾರರೇ ಕೋವಿನ್ ವೆಬ್‍ಸೈಟ್‍ಗೆ ಹೋಗಿ ಎಡಿಟ್ ಮಾಡಬಹುದು. ವಿದೇಶಗಳು ತಮ್ಮ ದೇಶಕ್ಕೆ ಬರುವ ಪ್ರಯಾಣಿಕರಿಗೆ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡಿದೆ.  ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈಗ ತಪ್ಪನ್ನು ಸರಿ ಮಾಡಿಕೊಳ್ಳಲು ಅವಕಾಶ ನೀಡಿದೆ.

ಲಸಿಕೆಯ ಪ್ರಮಾಣಪತ್ರದಲ್ಲಿರುವ ವರ್ಷ, ಲಿಂಗ, ಹೆಸರುಗಳು ಪಾಸ್‍ಪೋರ್ಟ್ ನಲ್ಲಿರುವ ವಿವರಗಳಿಗೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಜನರು ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರು. ಈ ದೂರುಗಳನ್ನು ಗಂಭೀರವಾಗಿ ಸ್ವೀಕರಿಸಿದ ಆರೋಗ್ಯ ಇಲಾಖೆ ಸಮಸ್ಯೆಯನ್ನು ಸರಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು

ಎಡಿಟ್ ಹೇಗೆ ಮಾಡಬೇಕು?
ಹಂತ 1. ಆರಂಭದಲ್ಲಿ www.cowin.gov.in  ಹೋಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೊಂದಾಯಿಸಿ.

ಹಂತ 2. ಈ ವೇಳೆ ನಿಮ್ಮ ಮೊಬೈಲ್ 6 ಸಂಖ್ಯೆಯ ಒಟಿಪಿ ಬರುತ್ತದೆ.

ಹಂತ 3: ಇಲ್ಲಿ ಕ್ಲಿಕ್ ಮಾಡಿ Verify & Proceed ಒತ್ತಿ.

cowin corona vaccine  2

ಹಂತ 4: ನಂತರ ಅಕೌಂಟ್ ಡಿಟೇಲ್ಸ್ ಗೆ ಹೋಗಿ.

ಹಂತ 5: ನೀವು ಲಸಿಕೆ ತೆಗೆದುಕೊಂಡರೆ “Raise an Issue” ಕ್ಲಿಕ್ ಮಾಡಿ.

cowin corona vaccine 1

ಹಂತ 6: ಈ ವೇಳೆ ವೆಬ್‍ಸೈಟ್ “What is the issue?”  ಎಂದು ಕೇಳುತ್ತದೆ. ಇಲ್ಲಿ “Correction in certificate” ಕ್ಲಿಕ್ ಮಾಡಿ ಏನು ತಪ್ಪಾಗಿದೆಯೋ ಅದನ್ನು ಸರಿಪಡಿಸಿಕೊಳ್ಳಬಹುದು. ಸರಿ ಮಾಡಿದ ಬಳಿಕ ಎಲ್ಲ ಮಾಹಿತಿ ಸರಿಯಾಗಿರುವ ಪ್ರಮಾಣಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.

Share This Article
Leave a Comment

Leave a Reply

Your email address will not be published. Required fields are marked *