ಬೆಂಗಳೂರು: ಕೊರೊನಾ ಲಸಿಕೆ ಅಭಿಯಾನಕ್ಕೆ ಇಂದಿನಿಂದ ಅಧಿಕೃತ ಚಾಲನೆ ಸಿಕ್ಕಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರ ಚಂದ್ರಶೇಖರ್ ಲಸಿಕೆಯನ್ನು ಮೊದಲು ನೀಡಲಾಗಿದೆ.
Advertisement
ಕೆಸಿ ಜನರಲ್‍ನಲ್ಲಿ ಲಸಿಕೆ ಪಡೆದ ಬಳಿಕ ಚಂದ್ರಶೇಖರ್ ಪಬ್ಲಿಕ್ ಟಿವಿಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನನಗೆ ಕೊರೊನಾ ಬಂದು ಹೋಗಿತ್ತು. ಹಾಗಾಗಿ ಲಸಿಕೆ ತೆಗೆದುಕೊಂಡಿದ್ದೇನೆ. ನನ್ನ ಜೊತೆ ಡಾಕ್ಟರ್ ಇದ್ದಾರೆ ನನಗೆ ಯಾವುದೇ ಭಯ ಇಲ್ಲ. ಯಾರು ಭಯ ಪಡಬೇಡಿ ವ್ಯಾಕ್ಸಿನ್ ತಗೋಳೋಕೆ ಮುಂದೆ ಬನ್ನಿ. ನಾನೇ ಮೊದಲನೇ ವ್ಯಕ್ತಿ ಲಸಿಕೆ ತಗೋಳೊದು ಅಂದಾಗ ಸ್ವಲ್ಪ ಉತ್ಸುಕನಾದೆ. ಎಲ್ಲರೂ ಬನ್ನಿ ವ್ಯಾಕ್ಸಿನ್ ತಗೋಳಿ ಭಯ ಬೇಡ ಎಂದು ಹೇಳಿದ್ದಾರೆ.
Advertisement
Advertisement
ಚಂದ್ರಶೇಖರ್ ಅವರಿಗೆ ಚಪ್ಪಾಳೆ ಹೊಡೆದು ಶುಭಕೋರಿ ವ್ಯಾಕ್ಸಿನ್ ಹಾಕಲಾಯ್ತು. ಚಂದ್ರಶೇಖರ್ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ಸಿವಿ ರಾಮನ್ ಆಸ್ಪತ್ರೆಯಲ್ಲಿ ತ್ಯಾಗರಾಜ್, ವಿಕ್ಟೋರಿಯಾದಲ್ಲಿ ನಾಗರತ್ನ, ಜಯನಗರದಲ್ಲಿ ಡಾ.ಕೃಷ್ಣಯ್ಯ ಮೊದಲಿಗರಾಗಿ ಲಸಿಕೆ ಪಡೆದುಕೊಂಡಿದ್ದಾರೆ.
Advertisement