ಕಾರವಾರ: ಮಾಜಿ ಸಚಿವ ಹಾಲಿ ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷಿಸಿಕೊಳ್ಳುವಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ.
#vaccinate
Took the 2nd dose of COVID19 vaccine at Manipal hospital yesterday. Now both my wife and myself, have received two doses each.
√ Request all those who are eligible to get vaccinated
√ Even if you are vaccinated, still follow social distancing and wear a mask pic.twitter.com/V8JXgFroMO
— R V Deshpande (@RV_Deshpande) April 20, 2021
ಹಳಿಯಾಳ ಕ್ಷೇತ್ರದ ಶಾಸಕರಾಗಿರುವ ಆರ್.ವಿ. ದೇಶಪಾಂಡೆ ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದ್ದು, ನನಗೆ ಕೊರೊನೊ ಸೋಂಕು ದೃಢವಾಗಿದೆ. ಕಳೆದ 15 ದಿನದಿಂದ ತನ್ನ ಸಂಪರ್ಕಕ್ಕೆ ಬಂದವರು ಪರೀಕ್ಷಿಸಿ ಕೊಳ್ಳಿ ಎಂದು ದೇಶಪಾಂಡೆ ಮನವಿ ಮಾಡಿದ್ದಾರೆ.
I have tested positive for COVID-19. I request everyone who came in close contact with me over the last few days to isolate themselves and get tested.
— R V Deshpande (@RV_Deshpande) April 23, 2021
ಏಪ್ರಿಲ್ 20 ರಂದು ಮಂಗಳೂರಿನಲ್ಲಿ ಎರಡನೇ ಬಾರಿ ಕೊರೊನ ಲಸಿಕೆ ಪಡೆದುಕೊಂಡಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಇಷ್ಟಾದರೂ ಕೂಡ ಇದೀಗ ಅವರಲ್ಲಿ ಕೊವಿಡ್ ಕಾಣಿಸಿಕೊಂಡಿದ್ದು ಬೇಗ ಗುಣಮುಖರಾಗಿ ಎಂದು ಅಭಿಮಾನಿಗಳು ಹಿತೈಷಿಗಳು ಅವರ ಪೋಸ್ಟ್ಗೆ ಪ್ರತಿಕ್ರಿಸಿದ್ದಾರೆ.