ರಾಯ್ಪುರ: ಕೊರೊನಾ ಲಸಿಕೆ ಕದಿದ್ದ ಕಳ್ಳರು ಪೊಲೀಸ್ ಠಾಣೆ ಎದುರು ಬಿಟ್ಟು ಕ್ಷಮೆ ಕೇಳಿ ಪತ್ರ ಬರೆದಿರುವ ಘಟನೆ ನಡೆದಿದೆ.
ಹರಿಯಾಣದ ಜಿಂದ್ ಜಿಲ್ಲೆಯ ಆಸ್ಪತ್ರೆಯಿಂದ ಕಳ್ಳತನವಾಗಿದ್ದ ಸುಮಾರು 1,700 ಡೋಸ್ ಕೊರೊನಾ ಲಸಿಕೆ ಪೊಲೀಸ್ ಠಾಣೆಯ ಎದುರು ಪತ್ತೆಯಾಗಿವೆ. ಇದರೊಂದಿಗೆ ತಮ್ಮನ್ನು ಕ್ಷಮಿಸುವಂತೆ ಕಳ್ಳರು ಮನವಿ ಮಾಡಿ ಪೊಲೀಸರಿಗೆ ಪತ್ರಬರೆದಿದ್ದಾರೆ.
ಆಸ್ಪತ್ರೆಯ ಶಟರ್ ಮುರಿದು ಒಳನುಗ್ಗಿದ್ದ ಇಬ್ಬರು ಕಳ್ಳರು ಸ್ಟೋರ್ ರೂಮ್‍ನಲ್ಲಿ ಸಂಗ್ರಹಿಸಿಟ್ಟಿದ್ದ ಲಸಿಕೆಗಳಿದ್ದ ಬಾಕ್ಸ್ ಕದ್ದು ಪರಾರಿಯಾಗಿದ್ದರು.ಕಳ್ಳತನವಾಗಿದ್ದ ಸ್ಟೋರ್ ರೂಮ್‍ನಲ್ಲಿ ಲ್ಯಾಪ್ ಟಾಪ್ ಹಾಗೂ 50 ಸಾವಿರ ರೂಪಾಯಿ ಹಣ ಇದ್ದರು ಕಳ್ಳರು ಮುಟ್ಟದೆ ಕೊರೊನಾ ಲಸಿಕೆಯನ್ನು ಕದ್ದುಕೊಂಡು ಹೋಗಿರುವುದು ವಿಶೇಷವಾಗಿದೆ ಎಂದು ಎಲ್ಲಡೆ ಸುದ್ದಿಯಾಗಿತ್ತು.
ಈ ಕಳ್ಳತನದ ಬೆನ್ನಲ್ಲೇ ಸ್ವಾರಿ ಕೊರೊನಾ ಲಸಿಕೆ ಅಂತ ಗೊತ್ತಿರಲಿಲ್ಲ ಎಂದು ಕಳ್ಳರು ಪತ್ರಬರೆದಿಟ್ಟು ಲಸಿಕೆ ಇದ್ದ ಬಾಕ್ಸ್ ಅನ್ನು ಪೊಲೀಸ್ ಠಾಣೆ ಸಮೀಪ ಬಿಟ್ಟುಹೋಗಿದ್ದಾರೆ.