ಬೆಂಗಳೂರು: ಕೊರೊನಾ ಟೆಸ್ಟ್ ವರದಿಗಾಗಿ ಗರ್ಭಿಣಿ ನಿತ್ಯವೂ 60 ಕಿಮೀ ದೂರ ಅಲೆದಾಡುತ್ತಿದ್ದಾರೆ.
ಹೊಸಕೋಟೆ ನಿವಾಸಿಯಾಗಿರುವ ತುಂಬು ಗರ್ಭಿಣಿ ಬುಧವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನೀಡಿದ್ದರು. ನಗರದ ವಾಣಿವಿಲಾಸ ಆಸ್ಪತ್ರೆಯ ವೈದ್ಯರು ಇಂದು ಗರ್ಭಿಣಿ ಹೆರಿಗೆಗೆ ಸಮಯದ ನೀಡಿದ್ದಾರೆ. ಆದರೆ ಕೋವಿಡ್ ವರದಿ ಇಲ್ಲದೇ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲುವುದಿಲ್ಲ ಎಂದಿದ್ದಾರೆ. ಪರಿಣಾಮ ಕಳೆದ 2 ದಿನಗಳಿಂದ ಗರ್ಭಿಣಿ ಪತಿಯೊಂದಿಗೆ ನಿತ್ಯ 60 ಕಿಮೀ ದೂರ ಪ್ರಯಾಣಿಸುತ್ತಿದ್ದಾರೆ.
Advertisement
Advertisement
ಗರ್ಭಿಣಿ ಮಹಿಳೆಯರಿಗೆ ಹೆರಿಗೆಗೂ ಮುನ್ನ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಅಲ್ಲದೇ ಇಂತಹವರ ವರದಿಯನ್ನು ಆಸ್ಪತ್ರೆಗಳು ಶೀಘ್ರವೇ ನೀಡಬೇಕು ಎಂದು ನಿಯಮಗಳಲ್ಲಿ ಸೂಚಿಸಲಾಗಿದೆ. ಆದರೆ ಆಸ್ಪತ್ರೆಯವರು ಮಾತ್ರ ಕೋವಿಡ್ ರಿಪೋರ್ಟ್ ನೀಡಲು ಅಲೆದಾಟ ನಡೆಸುತ್ತಿದ್ದಾರೆ. ಕಳೆದ ವಾರವೂ ಗರ್ಭಿಣಿ ಮಹಿಳೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದರು. ಆ ವರದಿಯನ್ನು 1 ವಾರದ ಬಳಿಕ ಆಸ್ಪತ್ರೆ ನೀಡಿತ್ತು. ಆದರೆ ಕೋವಿಡ್ ಟೆಸ್ಟ್ ಪರೀಕ್ಷೆ ಮಾಡಿದ 2 ದಿನದಲ್ಲಿ ನೀಡಿದರೆ ಮಾತ್ರ ಹೆರಿಗೆ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವುದಾಗಿ ವೈದ್ಯರು ಹೇಳಿದ್ದಾರೆ. ಪರಿಣಾಮ ಮಹಿಳೆ ಬುಧವಾರ ಮತ್ತೆ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಟೆಸ್ಟ್ ಮಾಡಿಸಿದ್ದರು.
Advertisement
Advertisement
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಹಿಳೆ, ಹೊಸಕೋಟೆಯಿಂದ ಬಂದಿದ್ದೇವೆ. ವಾಣಿವಿಲಾಸ ಆಸ್ಪತ್ರೆಯಲ್ಲಿ ಇಂದು ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಸಮಯ ನೀಡಿದ್ದಾರೆ. ಆದರೆ ನಾವು 4ನೇ ಬಾರಿ ಆಸ್ಪತ್ರೆ ಬಳಿ ಆಗಮಿಸಿದ್ದೇವೆ. ಆದರೆ ರಿಪೋರ್ಟ್ ನೀಡಿ ಎಂದರೇ ಯಾರು ಪ್ರತಿಕ್ರಿಯೆ ನೀಡುತ್ತಿಲ್ಲ. ಲ್ಯಾಬ್ ಬಳಿ ಹೋಗಿ ಕೇಳಿದರು ಯಾರು ಉತ್ತರಿಸುತ್ತಿಲ್ಲ. ಇಂದು ವರದಿ ತಂದು ಆಸ್ಪತ್ರೆ ಬಂದರೇ ಮಾತ್ರ ನಾವು ದಾಖಲಿಸಿಕೊಂಡು, ಶಸ್ತ್ರ ಚಿಕಿತ್ಸೆ ಮಾಡುತ್ತೇವೆ ಎಂದು ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.