ಕೊಪ್ಪಳ: ಜಿಲ್ಲಾದ್ಯಂತ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ರಸ್ತೆಗಿಳಿದ ವಾಹನ ಸವಾರರಿಗೆ ಜಿಲ್ಲಾ ಪೊಲೀಸ್ ಇಲಾಖೆ ಶಾಕ್ ನೀಡಿದ್ದು, ಕಳೆದ 27 ದಿನದಲ್ಲಿ ದಾಖಲೆ ಪ್ರಮಾಣದ 24,49,160 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.
Advertisement
ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ದಿನದಿಂದ ದಿನಕ್ಕೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂಬ ಆದೇಶದನ್ವಯ ಪೊಲೀಸ್ ಇಲಾಖೆ ದಾಖಲೆ ಪ್ರಮಾಣದಲ್ಲಿ ಪ್ರಕರಣ ದಾಖಲಿಸಿ, ವಾಹನ ಸವಾರರಿಗೆ ದಂಡ ವಿಧಿಸಿದೆ. ಜಿಲ್ಲಾದ್ಯಂತ ರಸ್ತೆ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನ ಸವಾರರು, ಮಾಸ್ಕ್ ಧರಿಸದೇ ಇರುವವರು, ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವವರನ್ನು ಹಿಡಿದು ಮೇ.10ರಿಂದ ಜೂ.7ರವರೆಗೆ ಬರೋಬ್ಬರಿ 13,608 ಪ್ರಕರಣ ದಾಖಲಿಸಿ 24,49,160 ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಸೋಂಕಿತರು ಐಸೋಲೇಶನ್, ಕ್ವಾರಂಟೈನ್ ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದ ಪರಿಣಾಮ ಅವರ ಮೇಲೂ ಕರ್ನಾಟಕ ಸೋಂಕು ಪ್ರತಿಬಂಧಕ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಸಾವನ್ನಪ್ಪಿದವರ ಸದ್ಗತಿಗಾಗಿ ತ್ರಿಮತಸ್ಥರಿಂದ ಹೋಮ
Advertisement
Advertisement
ಜಿಲ್ಲಾದ್ಯಂತ 1,866 ವಾಹನ ಜಪ್ತಿ: ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದರೂ, ಸಹ ಅನೇಕ ಜನರು ಅನಗತ್ಯವಾಗಿ ರಸ್ತೆಗಿಳಿದು ಗೊಂದಲ ಸೃಷ್ಟಿಸುತ್ತಿದ್ದರು. ಅಲ್ಲದೇ ಕೆಲವರು ಪೊಲೀಸರಿಗೆ ಸುಳ್ಳು ನೆಪ ಹೇಳಿ ನಗರದಲ್ಲಿ ತಿರುಗಾಡುತ್ತಿದ್ದರು. ಹೀಗಾಗಿ ಪೊಲೀಸರು
ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಅನಗತ್ಯವಾಗಿ ರಸ್ತೆಗೆ ಇಳಿದು ಸಂಚರಿಸುವ ವಾಹನಗಳನ್ನು ಯಾವುದೇ ಮುಲಾಜಿಲ್ಲದೆ ವಶಪಡಿಸಿಕೊಂಡು, ದಂಡ ವಿಧಿಸಿದ್ದಾರೆ. ಜಿಲ್ಲೆಯಲ್ಲಿ ಮೇ.10ರಿಂದ ಜೂ.7ರವೆರೆಗ 1,866 ವಾಹನಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
Advertisement
ವಾಹನ ಪಡೆಯಲು ಪರದಾಟ: ಜಪ್ತಿಗೊಂಡ ವಾಹನ ಮರಳಿ ಪಡೆಯಲು ವಾಹನ ಸವಾರರು ವಕೀಲರು ಮತ್ತು ನ್ಯಾಯಾಲಯಕ್ಕೆ ಎಡತಾಕುತ್ತಿದ್ದಾರೆ. ಅಲ್ಲದೇ ಕೆಲವರು ಪ್ರಭಾವಿ ವ್ಯಕ್ತಿಗಳ ಮುಖಾಂತರ ಪೊಲೀಸರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಾಹನ ಬಿಡುಗಡೆಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದನ್ನೂ ಓದಿ: ಲಾಕ್ ವಿಸ್ತರಣೆಯಾದ ಜಿಲ್ಲೆಗಳಲ್ಲಿ ಕಂಟ್ರೋಲ್‍ಗೆ ಬಾರದ ಪಾಸಿಟಿವಿಟಿ ರೇಟ್