ಧಾರವಾಡ: ಕೊರೊನಾ ಮಧ್ಯೆ ಗ್ರಾಮವೊಂದಕ್ಕೆ ಕೊರೊನಾ ಮಧ್ಯದಲ್ಲಿ ಈಗ ಚಿಕನ್ ಗುನ್ಯಾ ಕಾಟ ಆರಂಭವಾಗಿದೆ.
ಜಿಲ್ಲೆಯ ಲಕಮಾಪುರ ಎಂಬ 2 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಚಿಕನ್ ಗುನ್ಯಾ ಕಾಣಿಸಿಕೊಂಡಿದ್ದು. ಕಳೆದ ವಾರ ಗ್ರಾಮದಲ್ಲಿ ಕೈ ಕಾಲು ಬೇನೆ ಬಂದವರಿಗೆ ತಪಾಸಣೆ ಮಾಡಿಸಿದಾಗ, ಗ್ರಾಮದ ಒಬ್ಬರಲ್ಲಿ ಚಿಕನ್ ಗುನ್ಯಾ ಪತ್ತೆಯಾಗಿತ್ತು. ನಂತರ ಗ್ರಾಮದಲ್ಲಿ ಇದು ಹೆಚ್ಚಾಗಬಾರದೆಂದು ಆರೋಗ್ಯ ಇಲಾಖೆಯವರು ಲಾರ್ವಾ ಸರ್ವೇ ಕೂಡಾ ಮಾಡಿಸಿದ್ದರು. ಇದನ್ನು ಓದಿ:ಕಳ್ಳಬಟ್ಟಿ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ
Advertisement
Advertisement
ಈಗ ಗ್ರಾಮದಲ್ಲಿ ಚಿಕನ್ ಗುನ್ಯಾ ಹೆಚ್ಚಾಗಬಾರದೆಂದು ಫಾಗಿಂಗ್ ಕೂಡಾ ಮಾಡಲಾಗುತ್ತಿದೆ. ಎಲ್ಲ ಕಡೆ ಕೊರೊನಾ ಕೂಡಾ ಹೆಚ್ಚಾಗಿರುವ ಕಾರಣ, ನಿನ್ನೆಯಷ್ಟೇ ಇದೇ ಗ್ರಾಮದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. 60 ಜನರಿಗೆ ನಡೆಸಿದ ಕೊರೊನಾ ಟೆಸ್ಟ್‍ನಲ್ಲಿ ಎರಡು ಪಾಸಿಟಿವ್ ಬಂದಿವೆ.
Advertisement
Advertisement
ಸದ್ಯ ಗ್ರಾಮದಲ್ಲಿ ಚಿಕನ್ ಗುನ್ಯಾ ಹೆಚ್ಚಾಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದ್ದು, ಜನರಿಗೆ ಸ್ವಚ್ಛತೆ ಕಾಪಾಡಲು ಹಾಗೂ ನೀರು ಬಹಳ ದಿನಗಳ ತುಂಬಿ ಇಡದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಕೊರೊನಾ ಸೋಂಕು ಹರಡದಂತೆ ಗ್ರಾಮದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನು ಓದಿ: ಹೆದ್ದಾರಿಯಲ್ಲಿ ಚಾಲಕರನ್ನು ಬೆದರಿಸಿ ಹಣ ದರೋಡೆ – ಆರೋಪಿಗಳ ಬಂಧನ