ಬೆಂಗಳೂರು: ಕೊರೊನಾ ರಣಕೇಕೆ ಹಿನ್ನೆಲೆಯಲ್ಲಿ ಡಿಗ್ರಿ, ಪಿಜಿ, ಎಂಜಿಯರಿಂಗ್, ಡಿಪ್ಲೊಮೋ ಪರೀಕ್ಷೆಗಳನ್ನು ಸರ್ಕಾರ ರದ್ದು ಮಾಡಿದೆ. ಆದರೆ ಡೀಮ್ಡ್ ವಿವಿಗಳು ಮಾತ್ರ ಕೊರೊನಾ ಮಧ್ಯೆಯೂ ಪರೀಕ್ಷೆಗಳನ್ನು ನಡೆಸಲು ಮುಂದಾಗಿವೆ.
ಪದವಿ, ಸ್ನಾತಕೋತ್ತರ ಪದವಿ, ಕಾನೂನು, ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಕ್ರೈಸ್ಟ್ ವಿವಿ ಸೋಮವಾರದಿಂದ ಆನ್‍ಲೈನ್ ಪರೀಕ್ಷೆಗಳನ್ನು ಮಾಡಲಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕೆಲ ಡೀಮ್ಡ್ ವಿವಿಗಳು ಎಕ್ಸಾಂ ಮುಂದೂಡಿಕೆ ಮಾಡಿವೆ.
Advertisement
Advertisement
ಸೋಮವಾರದಿಂದ ಎಸ್‍ಎಸ್‍ಎಲ್‍ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಆರಂಭಗೊಳ್ಳಲಿದೆ. ಮಂಗಳವಾರದಿಂದ ಲಾಕ್‍ಡೌನ್ ಆಗಲಿರೋ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮೌಲ್ಯಮಾಪನ ನಡೆಯಲಿದೆ ಅಂತ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ದ್ವಿತೀಯ ಪಿಯು ಪರೀಕ್ಷೆ ರಿಸಲ್ಟ್ ಜುಲೈ 20ರಂದು ಬರಬಹುದು ಅಂತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
Advertisement
Advertisement
ಈ ಮಧ್ಯೆ ದಾವಣಗೆರೆ ಜೆಜೆಎಮ್ ಮೆಡಿಕಲ್ ಕಾಲೇಜಿನ ಮೆಡಿಕಲ್ ಪಿಜಿ ವಿಧ್ಯಾರ್ಥಿಗಳ ಶಿಷ್ಯ ವೇತನದ ಬಗ್ಗೆ ಕೂಡಲೇ ಕ್ರಮಕೈಗೊಳ್ಳಿ ಎಂದು ವೈದ್ಯ ಶಿಕ್ಷಣ ಮಂತ್ರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಕಾಲೇಜು ಆಡಳಿತ ಮಂಡಳಿ ಜೊತೆ ಇನ್ನೊಮ್ಮೆ ಚರ್ಚೆ ನಡೆಸಿ ಮನವೊಲಿಸಿ. ಇಲ್ಲದಿದ್ರೆ ಎಂಸಿಐಗೆ ಪತ್ರ ಬರೆದು ತಿಳಿಸಿ. ಪ್ರತಿಭಟನೆ ಮಾಡ್ತಿರೋ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಿ ಎಂದು ನಿರ್ದೇಶನ ನೀಡಿದ್ದಾರೆ.