ಲಕ್ನೋ: ಕೊರೊನಾ ಶಂಕಿತನ ಬ್ಲಡ್ ಸ್ಯಾಂಪಲ್ ಕಿತ್ತುಕೊಂಡು ಹೋಗಿ ಕೋತಿಯೊಂದು ರಂಪಾಟ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.
ಇಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ಲ್ಯಾಬ್‍ನಲ್ಲಿ ಕೆಲಸ ಮಾಡುವ ನೌಕರ ಬ್ಲಡ್ ಸ್ಯಾಂಪಲ್ ಅನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆಸ್ಪತ್ರೆ ಆವರಣದ ಮರದ ಮೇಲೆ ಇದ್ದ ಕೋತಿ ಬಂದು ಅದನ್ನು ಕಿತ್ತುಕೊಂಡು ಹೋಗಿ ರಂಪಾಟ ಮಾಡಿದೆ.
Advertisement
Meerut: Monkey run away with #corona test samples, locals fear spread of infection. #IndiaFightsCoronavirus pic.twitter.com/Mpe9tuR3H6
— Sanjay Jha (@JhaSanjay07) May 29, 2020
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ಮೀರತ್‍ನ ಲಾಲಾ ಲಜಪತ್ ರಾಯ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಎಸ್ ಕೆ ಗರ್ಗ್, ಈ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ನಮ್ಮ ಲ್ಯಾಬ್ ಸಿಬ್ಬಂದಿಯನ್ನು ವಿಚಾರಣೆ ಮಾಡಿದ್ದೇವೆ. ಕೋತಿ ಕಿತ್ತುಕೊಂಡು ಹೋಗಿರುವ ಸ್ಯಾಂಪಲ್ ಕೊರೊನಾ ಸೋಂಕಿತ ಗಂಟಲು ದ್ರವದ ಮಾದರಿಯನ್ನಲ್ಲ. ಬದಲಿಗೆ ನಾವು ಸಾಂಪ್ರದಾಯಕವಾಗಿ ಮಾಡುವ ಕೊರೊನಾ ಟೆಸ್ಟ್ ನ ಬ್ಲಡ್ ಸ್ಯಾಂಪಲ್ ಎಂದು ಹೇಳಿದ್ದಾರೆ.
Advertisement
Advertisement
ಕೊರೊನಾ ಸ್ಯಾಂಪಲ್‍ಗಳನ್ನು ಈ ರೀತಿಯಲ್ಲಿ ಕೈಯಲ್ಲಿ ಇಟ್ಟುಕೊಂಡು ಹೋಗುವುದಿಲ್ಲ. ಅವುಗಳನ್ನು ಒಂದು ಬಾಕ್ಸ್ ನಲ್ಲಿ ಇಟ್ಟು ಜೋಪಾನವಾಗಿ ರವಾನೆ ಮಾಡಲಾಗುತ್ತದೆ. ಕೋತಿ ಕಿತ್ತುಕೊಂಡು ಹೋಗಿರುವ ರಕ್ತದ ಮಾದರಿಯಲ್ಲಿ ಕೊರೊನಾ ಸೋಂಕು ಇರಲಿಲ್ಲ. ನಾವು ಚೆಕ್ ಮಾಡಿದ್ದೇವೆ. ಆದ್ದರಿಂದ ಯಾರೂ ಆತಂಕ ಪಡಬೇಕಿಲ್ಲ. ಜೊತೆಗೆ ನಾವು ಈ ಬಗ್ಗೆ ತನಿಖೆಗೆ ಅದೇಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಈ ಪ್ರಕರಣದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ ಲ್ಯಾಬ್ ನೌಕರನಿಗೆ ನೋಟಿಸ್ ನೀಡಲಾಗಿದ್ದು, ಆತನ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಆತ ಕೋತಿ ಸ್ಯಾಂಪಲ್ ಕಿತ್ತುಕೊಂಡಾಗ ಅದನ್ನು ಬಂದು ಅಧಿಕಾರಿಗಳಿಗೆ ತಿಳಿಸುವ ಬದಲು ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡು ತಮಾಷೆ ನೋಡಿದ್ದಕ್ಕೆ ಆಸ್ಪತ್ರೆಯ ಆಡಳಿತ ಆತನ ಮೇಲೆ ಕ್ರಮ ಕೈಗೊಳ್ಳಲಿದೆ ಎಂದು ಗರ್ಗ್ ತಿಳಿಸಿದ್ದಾರೆ.