ಬೆಂಗಳೂರು: ದೇಶದಲ್ಲಿ ಮಹಾಮಾರಿ ಕೊರೊನಾ ಇನ್ನೇನು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಮಕ್ಕಳಲ್ಲಿ ಇದೀಗ ಒಬೆಸಿಟಿ ಸಮಸ್ಯೆ ಕಾಡುತ್ತಿದೆ.
ಡೆಡ್ಲಿ ಕೊರೊನಾ ಬಂದಿದ್ದೇ ತಡ, ಒಂದಿಲ್ಲ ಒಂದು ಸಮಸ್ಯೆ ದಿನ ದಿನ ಕಾಡುತ್ತಲೆ ಇದೆ. ಕೊರೊನಾ ಬಂದಾಗಿನಿಂದ ಜನರ ಲೈಫ್‍ಸ್ಟೈಲ್ ಬದಲಾಗಿದೆ. ಒಂದೆಡೆ ಮಕ್ಕಳಿಗೆ ಆನ್‍ಲೈನ್ ಕ್ಲಾಸ್, ಇನ್ನೊಂದೆಡೆ ದೊಡ್ಡವರಿಗೆ ವರ್ಕ್ ಫ್ರಮ್ ಹೋಂ ಇದೆ. ಇದರಿಂದ ಮಕ್ಕಳ ಜೀವನ ಶೈಲಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.
ಪ್ರಪಂಚದಾದ್ಯಂತ ಕೊರೊನಾ ತಾಂಡವವಾಡುತ್ತಿದ್ದ ವೇಳೆ ಜನರು ಲಾಕ್‍ಡೌನ್ ಆಗಬೇಕಾಗಿತ್ತು. ಅಲ್ಲದೆ ಡೆಡ್ಲಿ ಕೊರೊನಾದಿಂದ ಮಕ್ಕಳು ಕೂಡ ಮನೆಯಲ್ಲಿಯೇ ಇದ್ದಾರೆ. ಹೀಗಾಗಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಬೊಜ್ಜಿನ ಪ್ರಮಾಣ ದಿಢೀರ್ ಜಾಸ್ತಿಯಾಗಿದೆ. ಮಕ್ಕಳಿಗಂತೂ ಅತಿಯಾಗಿ ಆರೋಗ್ಯ ಸಮಸ್ಯೆ ಕಾಡುತ್ತಿದೆ.
ಇನ್ನೂ ಒಬೆಸಿಟಿ ಸಮಸ್ಯೆಯನ್ನು ಹೊಂದಿರುವ ಶೇ.75ರಷ್ಟು ಪೇಷೆಂಟ್ ಗಳು ಹೆಚ್ಚಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಇದ್ದರಿಂದ ಜನರು ವಿಟಮಿನ್ ಎ, ವಿಟಮಿನ್ ಡಿ, ಅನಿಮಿಯಾ ಎಂಬ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಇವೆಲ್ಲವನ್ನು ದೂರ ಮಾಡಿ ನಮ್ಮ ದೇಹದಲ್ಲಿ ಇಮ್ಯೂನಿಟಿ ಹೆಚ್ಚಿಸಿಕೊಳ್ಳಬೇಕಾದರೆ ಗುಡ್ ಲೈಫ್‍ಸ್ಟೈಲ್ ಬೆಳೆಸಿಕೊಳ್ಳ ಬೇಕು ಎಂದು ಮಕ್ಕಳ ತಜ್ಞರಾದ ವೈ ಡಾ. ಸೌಮ್ಯ ನಾಗರಾಜ್ ಹೇಳಿದ್ದಾರೆ.