ನವದೆಹಲಿ: ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ ಕೊರೊನಾ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಚೀನಾದ ಲ್ಯಾಬ್‍ನಿಂದ ಕೊರೊನಾ ಹರಡಿರುವುದರ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಚೀನಾದಲ್ಲಿ ನಡೆಸುತ್ತಿರುವ ಅಧ್ಯಯನ ಭಾಗವಾಗಿ ಚೀನಾದ ಅಧ್ಯಯನ ತಂಡ ಡಬ್ಲ್ಯುಎಚ್‍ಒಗೆ ನೀಡಿರುವ ವರದಿಯಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಕೊರೊನಾ ಹರಡಿರುವ ಕುರಿತು ಪ್ರಸ್ತಾಪ ಮಾಡಿದೆ. ಇದರೊಂದಿಗೆ ಡಬ್ಲ್ಯುಎಚ್‍ಒ ತಂಡ ಕೇಳಿರುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡದೆ ಅಧ್ಯಯನ ಮುಂದುವರಿಸುದಾಗಿ ತಿಳಿಸಿದೆ.
Media briefing on #COVID19 with @DrTedros https://t.co/8z0i4zCmkm
— World Health Organization (WHO) (@WHO) March 26, 2021
ಚೀನಾ ಅಧ್ಯಯನ ತಂಡ ಈಗಾಗಲೇ ಹಲವು ಬಾರಿ ಕೊರೊನಾ ಕುರಿತು ವರದಿ ನೀಡಲು ವಿಫಲವಾಗಿದೆ. ಆದರೆ ಚೀನಾದ ಲ್ಯಾಬ್‍ನಿಂದ ಕೊರೊನಾ ಹರಡಿಲ್ಲ ಎಂಬುದನ್ನು ಸಾಬೀತುಪಡಿಸಲು ಚೀನಾ ಪ್ರಯತ್ನಿಸುತ್ತಿದೆ ಎಂಬ ಆರೋಪವು ಕೇಳಿಬರುತ್ತಿದೆ.
ಡಬ್ಲ್ಯುಎಚ್‍ಒ ಕೆಲದಿನಗಳ ಹಿಂದೆ ಕೊರೊನಾ ಹರಡಿರುವ ಕುರಿತು ಸ್ಪಷ್ಟವಾದ ಮಾಹಿತಿ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಇದರ ಭಾಗವಾಗಿ ಈಗಾಗಲೇ ಅಧ್ಯಯನ ತಂಡವು ಕಾರ್ಯಪ್ರವೃತ್ತವಾಗಿದ್ದು, ಮುಂದಿನ ದಿನಗಳಲ್ಲಿ ವರದಿ ಹೊರಬೀಳುವ ನಿರೀಕ್ಷೆ ಇದೆ.