ಚಂಡೀಗಢ: ಪಂಜಾಬ್‍ನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದಿನಿಂದ ಜಲಂಧರ್ ಜಿಲ್ಲೆಯಲ್ಲಿ ರಾತ್ರಿ 11 ರಿಂದ ಮುಂಜಾನೆ 5ರವರೆಗೂ ನೈಟ್ ಕರ್ಫ್ಯೂ ಮಾಡಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಘನಾಶ್ಯಾಮ್ ಥೋರಿ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲೆಯಲ್ಲಿ ಸುಮಾರು 134 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಪ್ರಸ್ತುತ 856 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಕಳೆದ ತಿಂಗಳು ಪಂಜಾಬ್ ಸರ್ಕಾರ ಕೊರೊನಾ ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ ನಡೆಸಲು ಆದೇಶಿಸಿತ್ತು. ಪಂಜಾಬ್‍ನಲ್ಲಿ ಶುಕ್ರವಾರ 818ಕ್ಕೂ ಹೊಸ ಪ್ರಕರಣಗಳು ದಾಖಲಾಗಿದ್ದು, 1,86,189ಕ್ಕೆ ಕೊರೊನಾ ಸಂಖ್ಯೆ ಏರಿಕೆಯಾಗಿದೆ. ಅಲ್ಲದೆ 11 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 5,898ಕ್ಕೆ ಏರಿಕೆಯಾಗಿದೆ.
Advertisement
Advertisement
ಮಹಾರಾಷ್ಟ್ರದ ನಂತರ ನಾಲ್ಕು ವಾರಗಳಲ್ಲಿ ಪಂಜಾಬ್‍ನಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗಿದ್ದು, 6,264 ಇದ್ದ ಕೊರೊನಾ ಸಕ್ರಿಯ ಪ್ರಕರಣಗಳು ಇದೀಗ 6661ಕ್ಕೆ ಏರಿಕೆಯಾಗಿದೆ. ಜಲಂಧರ್ ಬಳಿಕ ಲುಧಿನಾದಲ್ಲಿ 105 ಪ್ರಕರಣಗಳು, ಪಟಿಯಾಲದಲ್ಲಿ 104 ಪ್ರಕರಣಗಳು ವರದಿಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡು 400 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಒಟ್ಟಾರೆ ಈವರೆಗೂ 1,73,630 ಸೋಂಕಿನಿಂದ ಗುಣಮುಕ್ತರಾಗಿದ್ದಾರೆ.
Advertisement
ಇನ್ನೂ ಚಂಡೀಗಢದಲ್ಲಿ 76 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದೀಗ 22,116ಕ್ಕೆ ಕೊರೊನಾ ಸಂಖ್ಯೆ ಏರಿಕೆಯಾಗಿದೆ.