– ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ
ಗದಗ: ಡೆಡ್ಲಿ ವೈರಸ್‍ನಿಂದ ರಾಜ್ಯದಲ್ಲಿ ಇನ್ನು ಶಾಲೆಗಳು ಶುರುವಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಗದಗ ನಗರದ ಕೆಲ ಶಿಕ್ಷಕರು ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
Advertisement
ಕೊರೊನಾ ಭಯದಲ್ಲಿ ಸರ್ಕಾರವೇ ಇನ್ನೂ ಶಾಲೆಗಳನ್ನು ಶುರು ಮಾಡಿಲ್ಲ. ಇನ್ನು ವಠಾರ ಶಾಲೆಯಾದ ವಿದ್ಯಾಗಮ ತರಗತಿಗಳನ್ನು ನಿಲ್ಲಿಸಲಾಗಿದೆ. ಪಾಠಕ್ಕಿಂತ ಮಕ್ಕಳ ಜೀವ ಮುಖ್ಯ. ಹೀಗಾಗಿ ಸರ್ಕಾರವೇ ಶಾಲೆಗಳನ್ನು ತೆರೆಯಲು ಇನ್ನೂ ಧೈರ್ಯ ಮಾಡಿಲ್ಲ. ಆದರೆ ಗದಗದಲ್ಲಿ ಮಾತ್ರ ಟ್ಯೂಷನ್ ಹೆಸರಲ್ಲಿ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
Advertisement
ಕೊಠಡಿ ತುಂಬಾ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು, ಯಾವುದೇ ಸಾಮಾಜಿಕ ಅಂತರದವಿಲ್ಲದೆ ಅಕ್ಕಪಕ್ಕದಲ್ಲೇ ಕುಳಿತು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಸರ್ಕಾರಿ ಶಾಲೆ ಶಿಕ್ಷಕರು, ಉಪನ್ಯಾಸಕರೇ ತಮ್ಮ ಮನೆಗಳಲ್ಲಿ, ಚಿಕ್ಕಪುಟ್ಟ ರೂಮ್‍ನಲ್ಲಿ ಟ್ಯೂಷನ್ ನಡೆಸುತ್ತಿದ್ದಾರೆ. ವಿದ್ಯಾದಾನ ಸಮಿತಿ ಶಾಲೆ ಹೈಸ್ಕೂಲ್‍ನ ಶಿಕ್ಷಕ ರಾಮಚಂದ್ರ ಮೋನೆ ಎಂಬುವರು ಈ ರೀತಿ ಮಕ್ಕಳನ್ನು ಗುಡ್ಡೆ ಹಾಕಿಕೊಂಡು ಟ್ಯೂಷನ್ ನಡೆಸುತ್ತಿದ್ದಾರೆ.
Advertisement
Advertisement
ಒಂದೇ ಕೊಠಡಿಯಲ್ಲಿ 60ಕ್ಕೂ ಹೆಚ್ಚು ಮಕ್ಕಳಿಗೆ ಪಾಠ ಮಾಡ್ತಿದ್ದಾರೆ. 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಇವರ ಬಳಿ ಟ್ಯೂಷನ್‍ಗೆ ಬರುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಶಿಕ್ಷಕರಿಗೆ ಪ್ರಶ್ನೆ ಮಾಡಿದರೇ ಅವರು ಕೊಡುವ ಸಮಜಾಯಿಷಿನೇ ಬೇರೆಯಾಗಿದೆ. ಪೋಷಕರ ಒಪ್ಪಿಗೆ ಪಡ್ಕೊಂಡು ಮಕ್ಕಳು ಟ್ಯೂಷನ್‍ಗೆ ಬಂದಿದ್ದಾರೆ. ಹೀಗಾಗಿ ಅವರಿಗೆ ಕೊರೊನಾ ಬರಲ್ಲ ಎಂದಿದ್ದಾರೆ.
ಇತ್ತ ಶಿಕ್ಷಕರ ಟ್ಯೂಷನ್ ಫೀಸ್ ಕೇಳಿದರೆ ಶಾಕ್ ಹೋಗುವುದು ಪಕ್ಕ ಏಕೆಂದರೆ, ಶಾಲಾ ಮಕ್ಕಳಿಗೆ ಒಂದು ವಿಷ್ಯಕ್ಕೆ ಪಾಠ ಮಾಡೋದಕ್ಕೆ 5 ಸಾವಿರ. ಗಣಿತ-ವಿಜ್ಞಾನ ಎರಡೂ ವಿಷ್ಯಗಳಿಗೆ ಟ್ಯೂಷನ್ ಮಾಡೋದಕ್ಕೆ 10 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಹಣದ ದಾಹ ಒಂದು ಕಡೆಯಾದರೆ ಸರ್ಕಾರ ಅನುಮತಿ ಇಲ್ಲದೇ ತರಗತಿಗಳನ್ನು ನಡೆಸುವುದು ಹಾಗೂ ಯಾವುದೇ ಕೊರೊನಾ ಮುನ್ನೆಚ್ಚರಿಕೆ ವಹಿಸದಿರುವುದು ಸೋಂಕು ಹೆಚ್ಚಳವಾಗಲು ಕಾರಣವಾಗುವ ಸಾಧ್ಯತೆ ಇದೆ.