ಓಸ್ಲೋ: ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಪ್ರಧಾನಿಗೆ ದಂಡ ಹಾಕುವ ಮೂಲಕವಾಗಿ ತಮ್ಮ ಪ್ರಾಮಾಣಿಕತೆಯನ್ನು ಯರೋಪಿನ ನಾರ್ವೆ ಪೋಲಿಸರು ಮೆರೆದಿದ್ದಾರೆ.
ನಾರ್ವೆ ಪ್ರಧಾನಿ ಎರ್ನಾ ಸೊಲ್ಬೆರ್ಗ್ ಅವರು ತಮ್ಮ ಹುಟ್ಟುಹಬ್ಬ ಆಚರಣೆ ವೇಳೆ ಕುಟುಂಬದೊಂದಿಗೆ ಕೋವಿಡ್ ನಿಯಮವಾದ ಸಾಮಾಜಿಕ ಅಂತರವನ್ನು ಉಲ್ಲಂಘಿಸಿದ್ದರು. ಇದಕ್ಕಾಗಿ ಪೊಲೀಸರು ಬರೋಬ್ಬರಿ 20 ಸಾವಿರ ನಾರ್ವೆ ಕ್ರೌನ್ಸ್(ಅಂದಾಜು 1.75 ಲಕ್ಷ ರೂ.) ದಂಡವನ್ನು ವಿಧಿಸಿದ್ದಾರೆ.
ಕಳೆದ ತಿಂಗಳು ಎರ್ನಾ ಸೋಲ್ಬೆರ್ಗ್ ತಮ್ಮ ಕುಟುಂಬದವರ ಜೊತೆಗೆ ಜನ್ನದಿನಾಚರಣೆಯನ್ನು ಆಚರಿಸಿಕೊಂಡಿದ್ದರು. ದಂಡವನ್ನು ಕಟ್ಟುವುದರ ಜೊತೆಗೆ ಎರ್ನಾ ಸೊಲ್ಬೆರ್ಗ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕ್ಷಮೆಯನ್ನೂ ಕೇಳಿದ್ದಾರೆ ಎಂದು ವರದಿಯಾಗಿದೆ.