ಬೆಂಗಳೂರು: ಕೊರೊನಾ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಹೊಸಕೋಟೆ ಪೊಲೀಸ್ ಪಿಎಸ್‍ಐ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಯಾವುದೇ ದಾನ ಸ್ವೀಕರಿಸಲ್ಲ: ಉಪೇಂದ್ರ
Advertisement
ಹೊಸಕೋಟೆ ಪೊಲೀಸ್ ಠಾಣೆಯಲ್ಲಿಯೇ ಪಿಎಸ್‍ಐ ರಾಜು ತನ್ನ ಸಂಘಡಿಗರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಪಿಎಸ್‍ಐ ರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿಯನ್ನು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್‍ಗೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿಚೆನ್ನಣ್ಣನವರ್ ನೀಡಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್: ಸುರೇಶ್ ಕುಮಾರ್
Advertisement
Advertisement
ಮಂಗಳವಾರ ಸಂಜೆ ಸಬ್ ಇನ್‌ಸ್ಪೆಕ್ಟರ್ ರಾಜುಗೆ ಸಬ್ ಇನ್‌ಸ್ಪೆಕ್ಟರ್ ರಿಂದ ಇನ್‌ಸ್ಪೆಕ್ಟರ್ ಅಗಿ ಬಡ್ತಿ ಪಡೆದಿದ್ದರು. ಹೊಸಕೋಟೆ ಠಾಣೆಯಿಂದ ಇನ್‌ಸ್ಪೆಕ್ಟರ್ ಆಗಿ ಎಸಿಬಿಗೆ ವರ್ಗಾವಣೆ ಆಗಿತ್ತು. ಬಡ್ತಿ, ಜತೆಗೆ ಹುಟ್ಟಿದ ಹಬ್ಬ ಅಂತ ಕೆಲ ಠಾಣೆ ಸಿಬ್ಬಂದಿ ಜೊತೆ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ಹೋಸಕೋಟೆ ಪೊಲೀಸ್ ಠಾಣೆಯಲ್ಲಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಭರ್ಜರಿ ಡಾನ್ಸ್ ಮಾಡಿದ ಸಿಬ್ಬಂದಿ ಸಾಮಾಜಿಕ ಅಂತರವಿಲ್ಲ, ಯಾರೋಬ್ಬರು ಮಾಸ್ಕ್ ಧರಿಸಿರಲಿಲ್ಲ. ಒಟ್ಟಿಗೆ ಹತ್ತಾರು ಜನ ಸೇರಿ ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ.
Advertisement