ಡೆಹ್ರಾಡೂನ್: ಕೋವಿಡ್ 2ನೇ ಅಲೆ ನಡುವೆ ಹರಿದ್ವಾರದಲ್ಲಿ ಕುಂಭಮೇಳಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಜನರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಪವಿತ್ರ ಸ್ನಾನಕ್ಕಾಗಿ ಸಾವಿರಾರು ಮಂದಿ ಹರಿದ್ವಾರಕ್ಕೆ ಬಂದಿದ್ದಾರೆ. ಈ ವೇಳೆ ಕೊರೊನಾ ನಿಯಮವಾದ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದಾರೆ. ಕುಂಭಸ್ನಾನಕ್ಕಾಗಿ ಬಂದ ಭಕ್ತರಲ್ಲಿ ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳುವುದೂ ಕಷ್ಟ. ಅವರಿಗೆ ದಂಡ ವಿಧಿಸಲೂ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
Advertisement
#WATCH | Sadhus of Niranjani Akhara participate in second ‘shahi snan’ of #MahaKumbh at Har ki Pauri ghat in Uttarakhand’s Haridwar pic.twitter.com/eluxwFv8gG
— ANI (@ANI) April 12, 2021
Advertisement
ನಾವು ಜನರಲ್ಲಿ ಕೊರೊನಾ ನಿಯಮ ಪಾಲಿಸುವಂತೆ ಕೇಳಿಕೊಳ್ಳುತ್ತಿದ್ದೇವೆ. ಆದರೆ ಜನರ ಗುಂಪಿನಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂದು ಹರಿದ್ವಾರ ಕುಂಭ ಮೇಳದಲ್ಲಿ ಕರ್ತವ್ಯ ನಿರತರಾಗಿರುವ ಪೊಲೀಸ್ ಇನ್ಸ್‍ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್ ಹೇಳಿದ್ದಾರೆ.
Advertisement
Uttarakhand: Sadhus participate in the second ‘shahi snan’ of Maha Kumbh at Har Ki Pauri ghat in Haridwar pic.twitter.com/VMjd4h5Gcp
— ANI (@ANI) April 12, 2021
Advertisement
ಹರಿದ್ವಾರದ ಹರ್ ಕೀ ಪೌರಿಯಲ್ಲಿ ಗಂಗಾಸ್ನಾನಕ್ಕಾಗಿ ಸಾವಿರಾರು ಮಂದಿ ಬಂದು ಸೇರಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯವರೆಗೆ ಮಾತ್ರ ಸಾಮಾನ್ಯ ಜನರಿಗೆ ಇಲ್ಲಿ ಪ್ರವೇಶವಿದ್ದು, ನಂತರ ಸಾಧುಗಳಿಗೆ ಕಾಯ್ದಿರಿಸಲಾಯಿತು.