ಕೊರೊನಾ ನಿಯಮ ಉಲ್ಲಂಘನೆ – 61.41 ಲಕ್ಷ ದಂಡ ವಸೂಲಿ ಮಾಡಿದ ಬೀದರ್ ಪೊಲೀಸ್

Public TV
1 Min Read
Bidar police

ಬೀದರ್ : ಕೊರೋನಾ ಎರಡನೇಯ ಅಲೆಯ ಲಾಕ್‍ಡೌನ್ ವೇಳೆ ನಿಯಮ ಉಲ್ಲಂಘಿಸಿದವರ ಬಳಿ ಪೊಲೀಸರು ಬರೋಬ್ಬರಿ 61 ಲಕ್ಷದ 41 ಸಾವಿರ  ದಂಡ ವಸೂಲಿ ಮಾಡಿದ್ದಾರೆ.

ಪೇಸ್ ಮಾಸ್ಕ್ ಹಾಕದ 61400 ಜನರಿಗೆ ಪೊಲೀಸರು ಫೈನ್ ಹಾಕಿ ಶಾಕ್ ಮುಟ್ಟಿಸಿದ್ದಾರೆ. ಲಾಕ್‍ಡೌನ್ ವೇಳೆ ಕೊವೀಡ್ ನಿಯಮಗಳ ಉಲ್ಲಂಘನೆ ಮಾಡಿದ 128 ಜನರ ವಿರುದ್ದ ಎಫ್‍ಐಆರ್ ಕೂಡಾ ದಾಖಲು ಮಾಡಿದ್ದಾರೆ. ಜೊತೆಗೆ ಲಾಕ್ ಡೌನ್ ವೇಳೆ ಕೊವೀಡ್ ನಿಯಮಗಳ ಉಲ್ಲಂಘನೆ ಮಾಡಿದ 3850 ಗಾಡಿಗಳನ್ನು ಸೀಜ್ ಮಾಡಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಮಾರ್ಚ್ 15ರ ನಂತ್ರ ಜೀವನವೇ ಬದಲಾಯ್ತು: ನಟಿ ಮಯೂರಿ

Bidar police3 medium

ಕೊರೊನಾ ಎರಡನೇಯ ಅಲೆಯಲ್ಲಿ ಸೋಂಕು ನಿಯಂತ್ರಣ ಮಾಡಿ ಬೀದರ್ ರಾಜ್ಯಕ್ಕೆ ಮಾದರಿಯಾಗಿದೆ. ಆದರೆ ಬೀದರ್ ಜಿಲ್ಲಾಡಳಿತ ಕೊರೊನಾಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಸತತ ಪರಿಶ್ರಮ ಇದೆ. ಜಿಲ್ಲಾಡಳಿತದ ನಿರ್ದೇಶನದಂತೆ ಬೀದರ್ ಪೊಲೀಸರು ಕಠಿಣ ಲಾಕ್‍ಡೌನ್ ಜಾರಿ ಮಾಡಿ, ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸೋಂಕು ಇಳಿಮುಖವಾಗಿ ಬೀದರ್ ರಾಜ್ಯಕ್ಕೆ ಮಾದರಿಯಾಗಿದೆ. ಇದನ್ನೂ ಓದಿ: ಗೂಗಲ್‍ಗೆ 1,948 ಕೋಟಿ ರೂ. ದಂಡ ಹಾಕಿದ ಫ್ರಾನ್ಸ್

FotoJet 14

ಲಾಕ್‍ಡೌನ್ ಮುಗಿಯುವವರೆಗೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಲ್ಲಂಘನೆ ಮಾಡಿದವರಿಗೆ ಇದೇ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳುತ್ತೆವೆ ಎಂದು ಎಸ್‍ಪಿ ನಾಗೇಶ್ ಡಿಎಲ್ ಬೀದರ್ ಜನರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *