ವಾಷಿಂಗ್ಟನ್: ಕೊರೊನಾ ಸದ್ಯಕ್ಕೆ ಯಾವುದೇ ಔಷಧಿ ಇಲ್ಲ. ಹಲವು ಔಷಧಿಗಳನ್ನು ರೋಗಿಗಳಿಗೆ ನೀಡಿ ಪ್ರಯೋಗ ಮಾಡಲಾಗುತ್ತಿದೆ. ಆದರೆ ಈಗ ಮೊಲ್ನುಪಿರಾವೀರ್ ಔಷಧಿಯ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಹೌದು. ಈ ನಿರೀಕ್ಷೆ ಹೆಚ್ಚಾಗಲು ಕಾರಣ ಅಮೆರಿಕದ ಸಂಶೋಧಕರು ನೀಡಿರುವ ವರದಿ. ಮೊಲ್ನುಪಿರಾವೀರ್ ಔಷಧಿ ಸೇವಿಸಿದರೆ 24 ಗಂಟೆಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯುತ್ತದೆ ಎಂದು ಜಾರ್ಜಿಯಾ ಇನ್ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಸೈನ್ಸ್ ಸಂಶೋಧಕರು ಹೇಳಿದ್ದಾರೆ.
Advertisement
ಪ್ರಖ್ಯಾತ ನೇಚರ್ ಜರ್ನಲ್ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ. ಈ ಹಿಂದೆ ವೈರಸ್ನಿಂದ ಹರಡಿದ ಕೆಲ ಆರೋಗ್ಯ ಸಮಸ್ಯೆಗಳಿಗೆ ಈ ಔಷಧಿ ನೀಡಿದ್ದು ಯಶಸ್ವಿಯಾಗಿತ್ತು. ಈ ನಿಟ್ಟಿನಲ್ಲಿ ಸಂಶೋಧಕರು ಕೋವಿಡ್ 19 ರೋಗಿಗಳಿಗೂ ನೀಡಿದ್ದು ಯಶಸ್ವಿಯಾಗಿದ್ದಾರೆ ಎಂದು ಹೇಳಿದೆ.
Advertisement
Advertisement
ಮಾತ್ರೆ ಅಥವಾ ಕ್ಯಾಪ್ಯುಲ್ ಮೂಲಕ ಮೊಲ್ನುಪಿರಾವೀರ್ ಸೇವಿಸಬಹುದಾಗಿದ್ದು, ಪ್ರಯೋಗ ಅಮೆರಿಕದಲ್ಲಿ ಯಶಸ್ವಿಯಾದ ಬೆನ್ನಲ್ಲೇ ಭಾರತದಲ್ಲೂ ಪ್ರಯೋಗ ನಡೆಸಲು ಪ್ಲಾನ್ ಮಾಡಲಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿಎಸ್ಐಆರ್) ಕೊರೊನಾ ಸೋಂಕಿತರ ಮೇಲೆ ಪ್ರಯೋಗ ಮಾಡಲು ಮುಂದಾಗಿದೆ.
Advertisement
ಈ ಹಿಂದೆ ರೆಮ್ಡೆಸಿವಿರ್ ಔಷಧಿ ಸೇವನೆಯಿಂದ ಕೊರೊನಾ ರೋಗಿಗಳು ಬದುಕುತ್ತಾರೆ. ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ವರದಿಯಾಗಿತ್ತು. ಆದರೆ ಇದರಿಂದ ಅಷ್ಟೇನು ಪ್ರಯೋಜನ ಆಗಿಲ್ಲ ಎಂದು ನಂತರ ವರದಿಯಾಗಿತ್ತು.
ಈಗ ಮೊಲ್ನುಪಿರಾವೀರ್ ಔಷಧಿ ವೈದ್ಯ ಲೋಕದ ಗಮನ ಸೆಳೆದಿದ್ದು, ಒಂದು ವೇಳೆ ಯಶಸ್ವಿಯಾದರೆ ಇದು ಕೊರೊನಾ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಆಗುವ ಸಾಧ್ಯತೆಯಿದೆ.
ಕೋವಿಡ್ 19 ಬಾರದಂತೆ ತಡೆಯಲು ಲಸಿಕೆಗಳು ಬರುತ್ತವೆ. ಆದರೆ ಕೋವಿಡ್ 19 ಬಂದ ನಂತರ ಪಾರಾಗಲು ಔಷಧಿ ಇಲ್ಲ. ಈ ಕಾರಣಕ್ಕೆ ಈಗಾಗಲೇ ಅಭಿವೃದ್ಧಿ ಪಡಿಸಲಾಗಿರುವ ಔಷಧಿಗಳನ್ನು ಪ್ರಯೋಗಕ್ಕೆ ಒಳಪಡಿಸುವ ಮೂಲಕ ಪರೀಕ್ಷೆ ಮಾಡಲಾಗುತ್ತದೆ.