ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 3ನೇ ಅಲೆಯ ಆತಂಕ ದಟ್ಟವಾಗ್ತಿದೆ. ಯಾವುದೇ ಕ್ಷಣದಲ್ಲಿ ಅಪ್ಪಳಿಸಬಹುದು ಎಂಬ ಭಯ ಎಲ್ಲರನ್ನು ಕಾಡ್ತಿದೆ. ಇದರ ಬೆನ್ನಲ್ಲೇ ಎಚ್ಚೆತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ, ನಾಳೆ ಸಂಜೆ ಕೋವಿಡ್ ತಜ್ಞರ ಸಭೆ ಕರೆದಿದ್ದಾರೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಆಗಸ್ಟ್ 16ರಿಂದ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡುವ ಸಂಬಂಧ ಚರ್ಚೆ ನಡೆಸಲಿದ್ದಾರೆ. ಸಭೆ ಮುಗಿದ ಕೂಡಲೇ ಹೊಸ ಮಾರ್ಗಸೂಚಿ ಪ್ರಕಟವಾಗುವ ಸಂಭವ ಇದೆ.
Advertisement
8 ಜಿಲ್ಲೆಗಳಲ್ಲಿ ಈಗಾಗಲೇ ಜಾರಿಯಲ್ಲಿ ಇರುವ ಮಾದರಿಯಲ್ಲೇ ಬೆಂಗಳೂರಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗುವ ಸಾಧ್ಯತೆಗಳೂ ಹೆಚ್ಚಾಗಿವೆ. ಆದ್ರೆ ಏಕಾಏಕಿ ಲಾಕ್‍ಡೌನ್ ಮಾಡುವ ಯಾವುದೇ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದೆ ಇಲ್ಲ ಅಂತ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಕಂದಾಯ ಮಂತ್ರಿ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರ ಅಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಬಿಬಿಎಂಪಿ ವಿಶೇಷ ಆಯುಕ್ತ ಗೌರವ್ ಗುಪ್ತಾ ಕೂಡ ವೀಕೆಂಡ್ ಲಾಕ್‍ಡೌನ್ ಬಗ್ಗೆ ಸುಳಿವು ಕೊಟ್ಟಿದ್ದಾರೆ.
Advertisement
Advertisement
ಬೆಂಗಳೂರಿಗೆ ಕಠಿಣ ನಿಯಮಗಳು:
ಆಗಸ್ಟ್ 15 ನಂತರ ವೀಕೆಂಡ್ ಲಾಕ್ ಜೊತೆಗೆ ನೈಟ್ ಕರ್ಫ್ಯೂ ಅವಧಿ ವಿಸ್ತರಿಸುವ ಸಾಧ್ಯತೆಗಳಿವೆ. ಮಾರುಕಟ್ಟೆ, ಮಾಲ್ ಗಳಿಗೆ ನಿರ್ಬಂಧ ಹಾಕಿ ದೇವಸ್ಥಾನಗಳಿಗೆ ಮತ್ತಷ್ಟು ಕಠಿಣ ನಿಯಮಗಳನ್ನು ಪ್ರಕಟಿಸಬಹುದು. ಸೋಂಕಿತರ ಪತ್ತೆಗೆ ಹೊಸ ನಿಯಮಗಳನ್ನು ತರಬಹುದು. ಬೆಂಗಳೂರಲ್ಲೂ ಒಬ್ಬರಿಗೆ 20 ಮಂದಿ ಪ್ರಾಥಮಿಕ ಸಂಪರ್ಕಿತರ ಪತ್ತೆ ಮಾಡುವ ಗುರಿ ನೀಡಬಹುದು. ನೆರೆ ರಾಜ್ಯಗಳಿಗೆ ಬಸ್ ಸಂಚಾರ ಜೊತೆ ಕೆಲ ನಿರ್ಬಂಧ ಹಾಕುವ ಸಾಧ್ಯತೆಗಳಿವೆ. ಖಾಸಗಿ, ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ಸಿಬ್ಬಂದಿ ಮತ್ತು ಮದುವೆ, ಸಮಾರಂಭಗಳಲ್ಲಿ ಜನರಿಗೆ ಮಿತಿ ಹಾಕಬಹುದು. ಇದನ್ನೂ ಓದಿ: ವೃದ್ಧೆಯಿಂದ ಅನಾಥಾಶ್ರಮಕ್ಕೆ ಲಕ್ಷಾಂತರ ಬೆಲೆ ಬಾಳುವ ಜಾಗ ದಾನ
Advertisement
ಕೋವಿಡ್ ತಜ್ಞರ ಸಲಹೆ:
ಶನಿವಾರ ಕೋವಿಡ್ ತಜ್ಞರ ಸಭೆ ನಡೆಯುತ್ತಿರೋ ಬೆನ್ನಲ್ಲೇ ಸರ್ಕಾರಕ್ಕೆ ತಜ್ಞರು ಕೆಲವೊಂದು ಸಲಹೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಮುಂದಿನ 18 ದಿನ ನಿರ್ಣಾಯಕವಾಗಿದ್ದು, ಕೆಲವು ಟಫ್ ರೂಲ್ಸ್ ತರೋದು ಅನಿವಾರ್ಯ. ಪಾಸಿಟಿವಿಟಿ ದರ ಶೇ.2 ಅಥವಾ 3 ಆದ ಕೂಡಲೇ ಲಾಕ್ ಅಸ್ತ್ರ ಪ್ರಯೋಗಿಸಬೇಕು. ಪಾಸಿಟಿವಿಟಿ ದರ ಶೇ.5ರಷ್ಟು ಆದ್ರೆ ಅದು ಕಂಟಕವಾಗಲಿದೆ. ಅದು ಕೇವಲ 15 ರಿಂದ20 ದಿನದಲ್ಲಿ ಶೇ.25ಕ್ಕೆ ಏರಿಕೆಯಾಗಬಹುದು. ರಿಸ್ಕ್ ಬೇಡವೇ ಬೇಡ ‘ಹಾಫ್ ಲಾಕ್ ಮಾಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ, ನರಕವಾದ ಅಫ್ಘಾನಿಸ್ತಾನ- ರಾಜ್ಯಪಾಲ, ಸರ್ಕಾರಿ ಅಧಿಕಾರಿಗಳು ಶರಣಾಗತಿ