ಮೆಕ್ಸಿಕೊ: ಕೊರೊನಾ ಸೋಂಕು ಮಾತನಾಡುವಾಗ ಮತ್ತು ಆಹಾರ ಸೇವಿಸುವಾಗ ಹರಡದಂತೆ ತಡೆಗಟ್ಟಲು ಮೂಗನ್ನು ಮಾತ್ರ ಮುಚ್ಚುವ ಮಾದರಿಯ ಮಾಸ್ಕ್ ನ್ನು ಮೆಕ್ಸಿಕೊದ ಸಂಶೋಧಕರ ತಂಡವೊಂದು ತಯಾರಿಸಿದೆ.
ಮೆಕ್ಸಿಕೊದ ಸಂಶೋಧಕರ ಪ್ರಕಾರ ಜನರು ಮಾತನಾಡುವಾಗ ಮತ್ತು ತಿನ್ನುವಾಗ ಮಾಸ್ಕ್ ನ್ನು ತೆಗೆಯುತ್ತಾರೆ ಈ ವೇಳೆ ಕೊರೊನಾ ಸೋಂಕು ಹರಡುತ್ತದೆ ಹಾಗಾಗಿ ಇದನ್ನು ತಡೆಗಟ್ಟಲು ಕೇವಲ ಮೂಗಿಗೆ ಮಾತ್ರ ಬಳಸುವ ಮಾಸ್ಕ್ ಗಳನ್ನು ತಯಾರಿಸಿದ್ದಾರೆ. ಇದರಿಂದ ಕೊರೊನಾ ಹರಡುವುದನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುಎಸ್‍ಎನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಪ್ರಕಾರ, ಕೊರೊನಾ ವೈರಸ್ ಜನರ ವಾಸನೆಯ ಅಂಗವಾದ ಮೂಗಿನ ಮೂಲಕ ದೇಹದ ಒಳ ಸೇರುತ್ತಿದೆ. ಹಾಗಾಗಿ ಈರೀತಿ ಮಾಸ್ಕ್ ಬಳಸುವುದು ಮುಖ್ಯ. ಈ ಮೊದಲು ಕೊರೊನಾ ಹರಡದಂತೆ ತಡೆಗಟ್ಟಲು ಬಾಯಿ, ಮೂಗು ಮತ್ತು ಗಲ್ಲವನ್ನು ಮುಚ್ಚುವಂತಹ ಮಾಸ್ಕ್ ಬಳಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಜನರಿಗೆ ತಿಳಿಸಿತ್ತು.
Researchers in Mexico have designed a 'nose-only mask' which they say protects you while eating and drinking pic.twitter.com/juzIGAhSrP
— Reuters (@Reuters) March 25, 2021
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಅಧ್ಯಯನದ ಪ್ರಕಾರ ಮಾಸ್ಕ್ ನ ಬಳಕೆ ಅತೀ ಮುಖ್ಯವಾಗಿದೆ. ಮಾಸ್ಕ್ ನ್ನು ಧರಿಸುವ ಮೂಲಕ ವೇಗವಾಗಿ ಹರಡುತ್ತಿರುವ ಕೊರೊನಾ ಸೋಂಕನ್ನು ತಡೆಗಟ್ಟಬಹುದು ಎಂದು ಯುಎಸ್‍ಎನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ತಡೆಗಾಗಿ ಭಾರತ ಸರ್ಕಾರ ದೇಶದಾದ್ಯಂತ ಜನರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ರಿಪಬ್ಲಿಕನ್ ಗವರ್ನರ್ ಎರಿಕ್ ಹಾಲ್‍ಕಾಂಬ್ ತಮ್ಮ ಸ್ಟೇಟ್‍ಹೌಸ್ ಭಾಷಣದಲ್ಲಿ ಕೊರೊನಾ ತಡೆಗಾಗಿ ಸರ್ಕಾರ ಸಿದ್ಧವಾಗಿದ್ದು ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಎಪ್ರಿಲ್ 6 ರಿಂದ ಕೊರೊನಾ ಲಸಿಕೆಯನ್ನು ನೀಡಲು ತಯಾರಿ ನಡೆಸಲಾಗುತ್ತಿದೆ ಎಂದಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಕೊರೊನಾದಿಂದಾಗಿ 13,000 ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲೂ ಕೂಡ ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದ್ದು, ಜನರ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಕೂಡಲೇ ಲಸಿಕೆಯನ್ನು ನೀಡುವ ಕಾರ್ಯಕ್ಕೂ ಮುಂದಾಗುತ್ತಿದ್ದೇವೆ. ಸಾರ್ವಜನಿಕ ಸ್ಥಳ, ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಜನರೊಂದಿಗೆ ಹಾಲ್‍ಕಾಂಬ್ ಮನವಿ ಮಾಡಿಕೊಂಡಿದ್ದಾರೆ.