– ಉಡುಪಿಯಲ್ಲಿಂದು 73 ಮಂದಿಗೆ ಕೊರೊನಾ
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸಿದ್ದು, ಇಂದು ಒಂದೇ ದಿನ 73 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯ ಕೊರೊನಾ ಪೀಡಿತರ ಸಂಖ್ಯೆ 260ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ 73 ಸೋಂಕಿತರ ಪೈಕಿ 68 ಜನರನ್ನು ಪತ್ತೆ ಮಾಡಲಾಗಿದೆ. ಕೋವಿಡ್-19 ದೃಢಪಟ್ಟಿರುವ ಐದು ಮಂದಿ ಫೋನ್ ಸ್ವಿಚ್ ಆಫ್ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಫೋನ್ ಸ್ವಿಚ್ ಆಫ್ ಮಾಡಿದ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತೊಡಗಿದೆ.
Advertisement
Advertisement
ಸೋಂಕಿತರ ಪೈಕಿ 61 ಜನ ಮಹಾರಾಷ್ಟ್ರದಿಂದ ಬಂದವರು. ಮೂವರು ಅನಿವಾಸಿ ಭಾರತೀಯರು. ಜಿಲ್ಲೆಯ ನಾಲ್ಕು ಮಂದಿ ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಕೂಡ ಆತಂಕದ ವಿಚಾರ. ಸೋಂಕಿತರ ಪೈಕಿ ಗರ್ಭಿಣಿ, ಮಕ್ಕಳು ರೋಗ ಲಕ್ಷಣ ಇರುವ ಹಿರಿಯರನ್ನು ಉಡುಪಿಯ ಟಿಎಂಎ ಪೈ ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
Advertisement
ಕೊರೊನಾದ ಲಕ್ಷಣ ಇಲ್ಲದವನ್ನು ಆಯಾಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಶಂಕರ ನಾರಾಯಣ ಪೊಲೀಸ್ ಠಾಣೆ, ಉಡುಪಿ ಡಿಎಆರ್ ಪೊಲೀಸರು ಕೆಲಸ ಮಾಡಿದ ಸ್ಥಳಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಉಡುಪಿ ಎಸ್.ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.