ಕೊಪ್ಪಳ: ಲಾಕ್‍ಡೌನ್ ಮಧ್ಯೆಯೂ ಶಾಸಕರೊಬ್ಬರು ಕೊರೊನಾ ತೊಲಗಲಿ, ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಧನ್ವಂತರಿ ಯಾಗ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಜೂ 14ರವರೆಗೂ ಲಾಕ್‍ಡೌನ್ ಘೋಷಣೆ ಮಾಡಿ ಸಭೆ, ಸಮಾರಂಭ, ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಪೂಜೆಗೆ ಅವಕಾಶವಿಲ್ಲ, ಆದರೆ ಇಲ್ಲಿ ಶಾಸಕರೇ ಕೊರೊನಾ ನೆಪದಲ್ಲಿ ನಿಯಮ ಉಲ್ಲಂಘಿಸಿದ್ದಾರೆ. ಇದನ್ನೂ ಓದಿ: ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿ
ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಇಂದು ಕುಟುಂಬ ಸಮೇತರಾಗಿ ಕನಕಗಿರಿ ಕ್ಷೇತ್ರದ ಶ್ರೀರಾಮನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಧನ್ವಂತರಿ ಯಾಗ ಮಾಡಿದ್ದಾರೆ. ಅರ್ಚಕರೊಂದಿಗೆ ಭರ್ಜರಿ ಯಾಗ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವು ಬೆಂಬಲಿಗರು ಸಹ ಇದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಕೊಪ್ಪಳ ಜಿಲ್ಲೆಯಲ್ಲಿ ಈ ಮೊದಲು ಶೇ 30ರಷ್ಟು ಇದ್ದ ಪಾಸಿಟಿವಿಟಿ ದರ ಈಗ 3 ಪರ್ಸೆಂಟೇಜ್ ಇಳಿದಿದೆ. ಕ್ಷೇತ್ರದಲ್ಲಿ ಕೊರೊನಾ ಸಂಪೂರ್ಣ ಕಡಿಮೆಯಾಗಲಿ ಎಂದು ಯಾಗ ಮಾಡಲಾಗಿದ್ದು, ಈ ವರ್ಷ ಉತ್ತಮ ಮಳೆಯಾಗಿ ಬೆಳೆಯು ಬರಲಿ, ಕ್ಷೇತ್ರದ ಜನರೂ ಸುಭೀಕ್ಷೆಯಾಗಿರಲಿ ಎಂದು ಆಶಿಸಿ ಯಾಗ ಮಾಡಿದ್ದಾಗಿ ಹೇಳಿದ್ದಾರೆ. ಶಾಸಕ ಉದ್ದೇಶ ಸರಿ ಇರಬಹುದು ಆದರೆ ಜಿಲ್ಲಾಡಳಿತ ಮಾಡಿರುವ ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕಾಗಿದ್ದು ಸಹ ಶಾಸಕರ ಕರ್ತವ್ಯವಾಗಿದೆ ಎಂದು ಜನರು ಹೇಳುತ್ತಿದ್ದಾರೆ.