ಧಾರವಾಡ: ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಬಂದ ಗರ್ಭಿಣಿಯರು ಪರದಾಟ ಅನುಭವಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಜಿಲ್ಲೆಯ ಹಲವು ಪ್ರದೇಶದ ಎಲ್ಲ ಗರ್ಭಿಣಿಯರಿಗೆ ಕೊರೊನಾ ಟೆಸ್ಟ್ ಮಾಡಿಸಲು ಸೂಚನೆ ನೀಡಿದೆ. ಈ ಹಿನ್ನೆಲೆ ಗರ್ಭಿಣಿಯರನ್ನ ಆಶಾ ಕಾರ್ಯಕರ್ತೆಯರು ಕರೆ ತಂದಿದ್ದರು. ಆದರೆ ಇವರನ್ನ ಬೇಗ ತಪಾಸಣೆ ಮಾಡಿ ಕಳಿಸಿಕೊಡಬೇಕಿತ್ತು.
ಜಿಲ್ಲಾ ಆಸ್ಪತ್ರೆ ವೈದ್ಯರು ಇವರ ಟೆಸ್ಟ್ ಮಾಡದೇ ಇದ್ದಿದ್ದರಿಂದ ಗರ್ಭಿಣಿಯರು ಸ್ವ್ಯಾಬ್ ಕೇಂದ್ರದಲ್ಲಿ ಕಾಯುತ್ತಾ ಕುಳಿತುಕೊಳ್ಳಬೇಕಾಯಿತು. ಸ್ವ್ಯಾಬ್ ಕೇಂದ್ರದ ಎದುರು ನಿಲ್ಲುವುದಕ್ಕೂ ಸರಿಯಾದ ಸ್ಥಳ ಇಲ್ಲ. ಹೀಗಾಗಿ ಬೆಳಗ್ಗೆಯಿಂದಲೇ ಬಂದು ಕಾಯುತ್ತಾ ಕುಳಿತಿರುವ ಗರ್ಭಿಣಿಯರು, ಕಾದು ಕಾದು ಸುಸ್ತಾಗಿ ಪಕ್ಕದ ಕಟ್ಟದ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳಬೇಕಾಯಿತು.