ಬೆಂಗಳೂರು: ನಗರದ ಜಿಕೆವಿಕೆ ಕಾಲೇಜಿನಲ್ಲಿ ಕೊರೊನಾ ಸ್ಪೋಟಗೊಂಡಿದೆ. ಹಾಸ್ಟೆಲ್‍ನಲ್ಲಿದ್ದ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಹಾಗಾಗಿ ಹಾಸ್ಟೆಲ್‍ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲು ವಿಶ್ವವಿದ್ಯಾಲಯ ಮುಂದಾಗಿದೆ. ಆದರೆ ವಿದ್ಯಾರ್ಥಿನಿಯರು ಮಾತ್ರ ಕೊರೊನಾ ಟೆಸ್ಟ್ ಗೆ ಹೆದರಿ ಹಾಸ್ಟೆಲ್‍ನ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.
Advertisement
ನಗರದ ಜಿಕೆವಿಕೆ ಕೃಷಿ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಎರಡು ದಿನಗಳಿಂದ ಆಫ್ ಲೈನ್ ತರಗತಿ ಸ್ಥಗಿತ ಮಾಡಿ, ಆನ್ ಲೈನ್ ಕ್ಲಾಸ್ ಮಾಡಲಾಗುತ್ತಿತ್ತು. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲೇ ಇದ್ದರು. ಈ ವೇಳೆ ಹಾಸ್ಟಲ್‍ನಲ್ಲಿದ್ದ ವಿದ್ಯಾರ್ಥಿಗಳಲ್ಲೂ ಸೋಂಕು ಕಂಡುಬಂದಿದೆ.
Advertisement
ಇದರಿಂದ ಎಚ್ಚೆತ್ತುಕೊಂಡ ಕೃಷಿ ವಿವಿ, ಹಾಸ್ಟೆಲ್‍ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲು ಮುಂದಾಗಿದೆ. ಆದರೆ ವಿದ್ಯಾರ್ಥಿನಿಯರು ಮಾತ್ರ ಕೊರೊನಾ ಟೆಸ್ಟ್ ಮಾಡಿಸದೇ ಹಾಸ್ಟೆಲ್‍ನಿಂದ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
Advertisement
Advertisement
ಕೊರೊನಾ ಸೋಂಕಿನಿಂದಾಗಿ ಕೃಷಿ ವಿವಿಯಲ್ಲಿ ಹೊಸ ನಿಯಮ ತರಲಾಗಿತ್ತು. ಯಾರೇ ತಮ್ಮ ಮನೆಗೆ ಹೋಗಬೇಕಾದರು ಕೂಡ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಹೋಗಬೇಕು. ಅಲ್ಲದೆ ಸ್ವ ಇಚ್ಚೆಯಿಂದ ಮನೆಗೆ ಹೋಗುತ್ತಿದ್ದೇವೆ ಎಂದು ಪತ್ರ ಬರೆದು ಕೊಡುವಂತೆ ವಿವಿ ಆದೇಶ ಹೊರಡಿಸಿತ್ತು. ಇದಲ್ಲದೆ ಸೋಂಕು ಇಲ್ಲದೆ ಇದ್ದ ವಿದ್ಯಾರ್ಥಿಗಳನ್ನು ಮಾತ್ರ ಹಾಸ್ಟೆಲ್‍ನಿಂದ ಹೊರಗೆ ಬಿಡುವ ಕ್ರಮ ಕೈಗೊಂಡಿತ್ತು.
ಈ ಆದೇಶದ ಬಳಿಕ ಹಾಸ್ಟೆಲ್‍ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಗೆ ವಿವಿ ಮುಂದದಾಗ ಕೆಲ ವಿದ್ಯಾರ್ಥಿನಿಯರು ಟೆಸ್ಟ್ ನಿಂದ ತಪ್ಪಿಸಿಕೊಳ್ಳಲು ಹೇಳದೆ ಕೇಳದೆ ಹಾಸ್ಟಲ್ ಕಾಂಪೌಂಡ್ ಹಾರಿ ಓಡಿ ಹೋಗಿದ್ದಾರೆ. ಇದೀಗ ವಿದ್ಯಾರ್ಥಿನಿಯರ ಹಾಸ್ಟೆಲ್ ಕಾಂಪೌಂಡ್ ಹಾರಿ ಓಡುತ್ತಿರುವ ವೀಡಿಯೋ ಈಗ ಫುಲ್ ವೈರಲ್ ಆಗಿದೆ.