ಕೊರೊನಾ ಜಿಲ್ಲೆಗಳ ಜೊತೆ ಸಿಎಂ ಸಭೆ- ಹೆಮ್ಮಾರಿ ತಡೆಗೆ ಮಹತ್ವದ ತೀರ್ಮಾನ ಮಾಡ್ತಾರಾ ಬಿಎಸ್‍ವೈ

Public TV
3 Min Read
CM BSY

ಬೆಂಗಳೂರು: ರಾಜ್ಯದಲ್ಲಿ ಇವತ್ತು 2 ದೊಡ್ಡ ನಿರ್ಧಾರಗಳನ್ನು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಲಿದೆ. ಮೊದಲಿಗೆ ಕೊರೊನಾ ಸಂಬಂಧ ಸರ್ಕಾರದ ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದ್ದು, ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ.

CORONA VIRUS 13

ಬೆಂಗಳೂರು ಹೊರತುಪಡಿಸಿ ಮೈಸೂರು, ಬಳ್ಳಾರಿ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾವಿ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ, ಹಾಸನ ಜಿಲ್ಲೆಗಳ ಅಧಿಕಾರಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಈ ವೇಳೆ ಪ್ರತಿ ಜಿಲ್ಲೆಯ ಕೊರೊನಾ ರಿಪೋರ್ಟ್ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ಸಂಬಂಧ ಮಹತ್ವದ ತೀರ್ಮಾನ ಹೊರಬೀಳಲಿದೆ. ಇದರ ನಡುವೆಯೇ ಶಾಲಾ, ಕಾಲೇಜು ಆರಂಭದ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದ್ದು, ಈ ಸಭೆಯಲ್ಲೇ ಜಿಲ್ಲಾಡಳಿತದ ಅಭಿಪ್ರಾಯವನ್ನು ಸಿಎಂ ಪಡೆಯಲಿದ್ದಾರೆ.

CORONA VIRUS 6

ಕೊರೊನಾ ಡೇಂಜರ್ ಝೋನ್‍ನಲ್ಲಿರುವ 11 ಜಿಲ್ಲೆಗಳಲ್ಲಿ ಸೋಂಕಿನ ನಿಯಂತ್ರಣಕ್ಕೆ ಸಭೆಯಲ್ಲಿ ಮಹತ್ವದ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಬಳಿಕ ಹಲವು ಹೊಸ ರೂಲ್ಸ್ ಜಾರಿ ಮಾಡುವ ಸರ್ಕಾರ ಚಿಂತನ ನಡೆಸಿದ್ದು, ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡುತ್ತಾರಾ ಕಾದು ನೋಡಬೇಕಿದೆ.

ಕೊರೊನಾ ಜಿಲ್ಲೆಗಳಲ್ಲಿ ಸಿಎಂ ಅವರು ಜಾರಿ ಮಾಡಬಹುದಾದ ಕಠಿಣ ನಿಯಮಗಳ ಬಗ್ಗೆ ನೋಡುವುದಾದರೆ, ಕೊರೊನಾ ಟೆಸ್ಟ್ ಹೆಚ್ಚಿಳ, ಮಾಸ್ಕ್ ಬಳಕೆ ಬಗ್ಗೆ ಜನ ಜಾಗೃತಿಗಾಗಿ ವಿಶೇಷ ಕ್ರಮಕ್ಕೆ ಸೂಚಿಸಬಹುದು. ಸೋಂಕಿತ ಸಂಪರ್ಕಿತರನ್ನು ಪತ್ತೆ ಹಚ್ಚಿ ಅವರಿಗೆ ಟೆಸ್ಟ್ ಮಾಡಲು ಸೂಚಿಸಬಹುದು. ಕಂಟೈನ್ಮೆಂಟ್ ವಲಯಗಳಲ್ಲಿ ಮತ್ತಷ್ಟು ಬಿಗಿ ಕ್ರಮಕ್ಕೆ ಸೂಚನೆ ನೀಡಬಹುದು. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಪ್ರತಿ ಕುಟುಂಬದ ಟೆಸ್ಟ್ ಗೆ ಸಲಹೆ ನೀಡಬಹುದು. ಸಭೆ, ಸಮಾರಂಭ, ಮಾರುಕಟ್ಟೆ, ಜನ ಹೆಚ್ಚು ಸೇರುವ ಪ್ರದೇಶಗಳಲ್ಲಿ ಕಠಿಣ ಕ್ರಮಕ್ಕೆ ಸೂಚಿಸಬಹುದು. ಸಾರಿಗೆ ವ್ಯವಸ್ಥೆ ಮೇಲೆ ಹೆಚ್ಚು ನಿಗಾ ಇಡುವಂತೆ ಸೂಚನೆ ನೀಡಬಹುದು. ಸಾಮಾಜಿಕ ಅಂತರ ಬಗ್ಗೆ ಜಾಗೃತಿ ಮೂಡಿಸಲು ವಿಭಿನ್ನ ಕಾರ್ಯಕ್ರಮ ರೂಪಿಸಲು ಹೇಳಬಹುದು. ಸೋಂಕಿತರಿಗೆ ಅಗತ್ಯ ಔಷಧಗಳ ಪೂರೈಕೆಗೆ ಕ್ರಮಕ್ಕೆ ಸೂಚನೆ ನೀಡಬಹುದುದಾಗಿದೆ.

bsy 3

ಬೆಂಗಳೂರು ನಗರ ಸೇರಿದಂತೆ 11 ಜಿಲ್ಲೆಗಳು ಕೊರೊನಾ ಡೇಂಜರ್ ಝೋನ್ ಜಿಲ್ಲೆಗಳಾಗಿದ್ದು, ಬೆಂಗಳೂರಿನಲ್ಲಿ ಒಟ್ಟು 2,62,241 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 58,624 ಸಕ್ರಿಯ ಪ್ರಕರಣಗಳಿದೆ. 3,190 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 39,590 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 7056 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 840 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Covid 19 Fight

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 33,515 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 2,880 ಸಕ್ರಿಯ ಪ್ರಕರಣಗಳಿದೆ. ಇದುವರೆಗೂ 482 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ 25,276 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 4,686 ಸಕ್ರಿಯ ಪ್ರಕರಣಗಳಿದೆ. 588 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 20,575 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 1,515 ಸಕ್ರಿಯ ಪ್ರಕರಣಗಳು ಹಾಗೂ 310 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ 19,573 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 4,140 ಸಕ್ರಿಯ ಪ್ರಕರಣಗಳಿದೆ. ಒಟ್ಟು 324 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

covid 19

ಧಾರವಾಡ ಜಿಲ್ಲೆಯಲ್ಲಿ 18,272 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 2,625 ಸಕ್ರಿಯ ಪ್ರಕರಣಗಳು ಹಾಗೂ 510 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 18,001 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 2,865 ಸಕ್ರಿಯ ಪ್ರಕರಣಗಳಿದೆ. 310 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಉಡುಪಿ  ಜಿಲ್ಲೆಯಲ್ಲಿ 18,571 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 2,096 ಸಕ್ರಿಯ ಪ್ರಕರಣ ಹಾಗೂ 162 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 15,413 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 3,013 ಸಕ್ರಿಯ ಪ್ರಕರಣ ಹಾಗೂ 272 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 10,503 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 2,208 ಸಕ್ರಿಯ ಪ್ರಕರಣಗಳಿದೆ. 122 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *