ತಿರುವನಂತಪುರಂ: ಕೊರೊನಾ ಜಾಗೃತಿಯನ್ನು ಮೂಡಿಸಲು ಪೊಲೀಸರು ವಿಭಿನ್ನವಾದ ಪ್ರಯತ್ನವನ್ನು ಮಾಡಿದ್ದಾರೆ. ಹಾಡೊಂದಕ್ಕೆ ಹೆಜ್ಜೆ ಹಾಕುವ ಮೂಲಕವಾಗಿ ಜಾಗೃತಿಯನ್ನು ಮೂಡಿಸಿದ್ದಾರೆ.
Advertisement
ಕೇರಳದ ಪೊಲೀಸರು ಡಾನ್ಸ್ ಮಾಡಿರುವ ವೀಡಿಯೋ ಕೇರಳದ ರಾಜ್ಯ ಪೊಲೀಸ್ ಮಾಧ್ಯಮ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದು ಎಲ್ಲರ ಗಮನ ಸೇಳೆಯುತ್ತಿದೆ. ಈ ಹಾಡಿನಲ್ಲಿ ಸಾಮಾಜಿ ಅಂತರ ಕಾಯ್ದುಕೊಳ್ಳಿ, ಕೈ ತೊಳೆಯುತ್ತೀರಿ, ಮಾಸ್ಕ್ ಧರಿಸಿ ಎನ್ನುವ ಸಾಲುಗಳಿವೆ. ತಮಿಳಿನ ಎಂಜಾಯ್ ಎಂಜಾಮಿ ಹಾಡಿಗೆ ಜಾಗೃತಿ ಮೂಡಿಸುವ ಸಂದೇಶವನ್ನು ಸೇರಿಸಿ ನೃತ್ಯ ಮಾಡಿದ್ದಾರೆ.
Advertisement
Advertisement
Advertisement
ಎಲ್ಲರೂ ಕೊರೊನಾ ವಿರುದ್ಧವಾಗಿ ಹೋರಾಟ ಮಾಡೋಣ. ನಿಮ್ಮ ಜೊತೆಗೆ ಕೇರಳ ಪೊಲೀಸ್ ಇದೆ ಎಂದು ಬರೆದುಕೊಂಡು ಈ ವೀಡಿಯೋವನ್ನು ಶೇರ್ ಮಾಡಲಾಗಿದೆ. 3.5 ಲಕ್ಷ ವೀಕ್ಷಣೆಯಾಗಿದ್ದು, 14,000 ಬಾರಿ ಶೇರ್ ಆಗಿದೆ. 36,000 ಲೈಕ್ ಪಡೆದುಕೊಂಡಿದೆ. ಕೊರೊನಾ ಜಾಗೃತಿಯ ಸಂದೇಶವನ್ನೊಳಗೊಂಡ ಈ ಹಾಡನ್ನು ಹಲವರು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚಿ ಹಂಚಿಕೊಂಡಿದ್ದಾರೆ.