ಕೊರೊನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಕಾಂಗ್ರೆಸ್ ಶಾಸಕ ನಿಧನ

Public TV
1 Min Read
Kailash Chandra Trivedi

ಜೈಪುರ: ರಾಜಸ್ಥಾನ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಶಾಸಕ ಕೈಲಾಶ್ ಚಂದ್ರ ತ್ರಿವೇದಿ (65) ಇಂದು ನಿಧನರಾಗಿದ್ದಾರೆ.

ಇತ್ತೀಚೆಗೆ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಶ್ವಾಸಕೋಶದ ಅನಾರೋಗ್ಯದ ಸಮಸ್ಯೆಯಿಂದ ಬಳಲಿ ಕೈಲಾಶ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕೈಲಾಶ್ ಅವನ್ನು ಅಕ್ಟೋಬರ್ 2 ಏರ್ ಆಂಬುಲೆನ್ಸ್ ಮೂಲಕ ಗುರುಗ್ರಾಮದ ವೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಕಾರಿ ಆಗದೇ ಅಕ್ಟೋಬರ್ 5ರ ಮಧ್ಯರಾತ್ರಿ ಸಾವನ್ನಪ್ಪಿದ್ದರು. ಕಳೆದ ಒಂದು ತಿಂಗಳ ಹಿಂದೆ ಕೈಲಾಶ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು.

Kailash Chandra Trivedi b

ಮೂರು ಬಾರಿ ಸಹಾರಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಇವರ ಕುಟುಂಬ ಸದಸ್ಯರಲ್ಲಿ ಹೆಚ್ಚಿನವರು ಪಂಚಾಯಿತ್ ರಾಜ್ ಸಂಸ್ಥೆಗಳಿಗೆ ಆಯ್ಕೆಯಾದರು. ಇವರ ತಂದೆ ಭನ್ವರ್ ಲಾಲ್ ತ್ರಿವೇದಿ ರಾಯ್ಪುರದ ಪಂಚಾಯತ್ ಸಮಿತಿಗೆ ಆಯ್ಕೆಯಾಗಿದ್ದರು. ತಂದೆಯ ಬಳಿಕ ಕೈಲಾಶ್ ಅವರು ಪಂಚಾಯತ್ ಸಮಿತಿ ಅಧ್ಯಕ್ಷರಾಗಿದ್ದರು. 2003ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. 2ನೇ ಬಾರಿ ಚುನಾವಣೆಯಲ್ಲಿ ಸೋಲುಂಡಿದ್ದ ಅವರು 2013 ಮತ್ತು 2018 ರಲ್ಲಿ ಎರಡು ಬಾರಿ ಗೆಲುವು ಪಡೆದಿದ್ದರು.

ತ್ರಿವೇದಿ ಅವರ ಸಾವಿಗೆ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಕಷ್ಟದ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು, ಬೆಂಬಲಿಗರಿಗೆ ಸೋವು ಭರಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

covid 19

Share This Article
Leave a Comment

Leave a Reply

Your email address will not be published. Required fields are marked *