ಕೊರೊನಾ ಕೇರ್ ಸೆಂಟರ್ ಆರಂಭಿಸಿದ ಗ್ರಾಮಸ್ಥರು-ಸೋಂಕು ನಿಯಂತ್ರಣಕ್ಕೆ ದಿಟ್ಟ ನಿರ್ಧಾರ

Public TV
1 Min Read
Coronavirus testing

ದಾವಣಗೆರೆ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸೋಂಕಿನ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಸೋಂಕಿತರು ಮನೆಯಲ್ಲೇ ಇದ್ದು ಮತ್ತಷ್ಟು ಸೋಂಕು ಹೆಚ್ಚಾಗುವ ರೀತಿ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರೆ ಸೇರಿ ಕೊರೊನಾ ಸೆಂಟರ್‌‌ವೊಂದನ್ನು ಆರಂಭಿಸಿದ್ದಾರೆ.  ಇದನ್ನೂ ಓದಿ: ಸಿಎಂ ಬಿಎಸ್‍ವೈಗೆ ಹೈಕಮಾಂಡ್ ಬಿಗ್ ರಿಲೀಫ್ – ಸಕ್ರಿಯರಲ್ಲದ ಸಚಿವರಿಗೆ ಕೊಕ್ ಸಾಧ್ಯತೆ

coronavirus vaccine Serum Institute COVID 19

ಮಾಜಿ ಸಿಎಂ ದಿ. ಜೆ.ಎಚ್ ಪಟೇಲ್ ತವರೂರು ಕಾರಿಗನೂರು ಗ್ರಾಮದಲ್ಲಿ ಕೊರೊನಾ ಸೋಂಕು ಹೆಚ್ಚಳವಾದ ಕಾರಣ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಕೋವಿಡ್ ಸೆಂಟರ್ ಆರಂಭಿಸಿದ್ದಾರೆ. ಇಂಜೆಕ್ಷನ್, ಔಷಧೋಪಚಾರ ಹೊರತುಪಡಿಸಿ ಉಳಿದೆಲ್ಲವನ್ನೂ ಸ್ಥಳೀಯವಾಗಿ ಕ್ರೋಢಿಕರಿಸಿ ಮನೆಯ ವಾತಾವರಣ ಅನುಭವಕ್ಕೆ ಬರುವಂತ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮದಲ್ಲಿ 15ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಮೊರಾರ್ಜಿ ಬಾಲಕರ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತವಾಗಿ ಕೋವಿಡ್ ಲಸಿಕೆ ನೀಡುವಂತೆ ಯುವ ಕಾಂಗ್ರೆಸ್ ಆಗ್ರಹ

ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಅವರ ನೇತೃತ್ವದಲ್ಲಿ ಈ ಸೆಂಟರ್ ಆರಂಭಿಸಲಾಗಿದ್ದು, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯರು ತಮ್ಮ ಕೈಯಲ್ಲಾದಷ್ಟರ ಮಟ್ಟಿಗೆ ಸಹಾಯ ಮಾಡಿದ್ದಾರೆ. ಜೊತೆಗೆ ಸೋಂಕಿತರಿಗೆ ತಾನು ರೋಗಿ, ಆಸ್ಪತ್ರೆಯಲ್ಲಿದ್ದೇನೆ ಎಂಬುದು ನೆನಪಿಗೆ ಬಾರದ ರೀತಿಯಲ್ಲಿ ವಿಶಾಲವಾದ ಜಾಗದಲ್ಲಿ ಸೆಂಟರ್ ರೂಪಿಸಲಾಗಿರುವುದು ಮತ್ತೊಂದು ವಿಶೇಷವಾಗಿದೆ.

Corona 1 1

ಬೆಡ್ ಸಿಗದ ಕಾರಣ ಆಸ್ಪತ್ರೆಗೆ ಹೋಗಿ ಪರದಾಡುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಎಲ್ಲದಕ್ಕೂ ಸರ್ಕಾರವನ್ನೇ ನಿರೀಕ್ಷಿಸುವುದಕ್ಕಿಂತ ನಮ್ಮಿಂದಾದಷ್ಟು ಸೌಲಭ್ಯ ಒದಗಿಸಿದರೆ, ಎಚ್ಚರಿಕೆ ವಹಿಸಿದರೆ ಕೋವಿಡ್ ನಿಯಂತ್ರಣವನ್ನು ಶೀಘ್ರವಾಗಿ ನಿಯಂತ್ರಿಸಲು ಸಹಕಾರಿಯಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *