ಬೆಂಗಳೂರು: ಕೊರೊನಾ ಲಾಕ್‍ಡೌನ್ ಕಾರಣದಿಂದ ಬ್ಯುಸಿನೆಸ್ ಲಾಸ್ ಆಗಿ ಡ್ರಗ್ ಡೀಲರ್ ಮಹಮದ್ ಅನೂಫ್ ಎನ್‍ಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕಳೆದ ಗುರುವಾರ ಎನ್‍ಸಿಬಿ ಅಧಿಕಾರಿಗಳು ಭರ್ಜರಿ ಭೇಟಿಯಾಡಿದ್ದರು. ಸಿಲಿಕಾನ್ ಸಿಟಿಯಲ್ಲಿ ಹೈಟೆಕ್ ಡ್ರಗ್ ದಂಧೆ ಮಾಡುತ್ತಿದ್ದ ಮೂವರ ಡ್ರಗ್ ಪೆಡ್ಲರ್ ಗಳನ್ನು ಅರೆಸ್ಟ್ ಮಾಡಿದ್ದರು. ಇದರಲ್ಲಿ ಅರೆಸ್ಟ್ ಆದ ಮಹಮದ್ ಅನೂಫ್, ಕೊಚ್ಚಿ ಮೂಲದವನು ಎಂದು ಎನ್‍ಸಿಬಿ ಅಧಿಕಾರಿಗಳ ತನಿಖೆ ವೇಳೆ ತಿಳಿದು ಬಂದಿದೆ.
Advertisement
Advertisement
ಮೂಲತಃ ಕೊಚ್ಚಿ ಅವನಾದ ಅನೂಫ್ ಮೊದಲು ಬೆಂಗಳೂರಿನಲ್ಲೇ ವಾಸವಿದ್ದ. ಈ ಮುಂಚೆಯೇ ಬೆಂಗಳೂರಿನಲ್ಲಿ ಡ್ರಗ್ಸ್ ಡೀಲ್ ಮಾಡಿ ಲಕ್ಷಾಂತರ ಹಣ ಸಂಪಾದನೆ ಮಾಡಿದ್ದ. ಈ ಹಣವನ್ನು ತೆಗೆದುಕೊಂಡು ತನ್ನೂರಿಗೆ ಹೋಗಿ ಬ್ಯುಸಿನೆಸ್ ಸ್ಟಾರ್ಟ್ ಮಾಡಿದ್ದ. ಆದರೆ ಅಷ್ಟರಲ್ಲೇ ಕೊರೊನಾ ಮಹಾಮಾರಿಗೆ ದೇಶವೇ ಲಾಕ್‍ಡೌನ್ ಆಗಿತ್ತು. ಅನೂಫ್ ಬ್ಯುಸಿನೆಸ್ ನೀರಲ್ಲಿ ಹೋಮ ಮಾಡಿದಂತೆ ಆಗಿತ್ತು. ಇದನ್ನು ಓದಿ: ಡ್ರಗ್ ಡೀಲರ್ ಅನಿಕಾಳಿಗಿವೆ ಮೂರು ನೇಮ್ – ಫುಲ್ ಡಿಟೇಲ್ಸ್ ಕಲೆಹಾಕಿದ ಎನ್‍ಸಿಬಿ
Advertisement
Advertisement
ಈ ಲಾಸ್ ಅನ್ನು ಸರಿದೂಗಿಸಲು ಲಾಕ್‍ಡೌನ್ ವೇಳೆ ಮತ್ತೆ ಅನೂಫ್ ಬೆಂಗಳೂರಿಗೆ ಬಂದಿದ್ದಾನೆ. ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರಿಸಿ ಡ್ರಗ್ ಸಪ್ಲೇ ಮಾಡಲು ಹೋಗಿದ್ದಾನೆ. ಈ ವೇಳೆ ಆತ ಎನ್‍ಸಿಬಿ ಅಧಿಕಾರಿಗಳಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಅನೂಫ್ ಡ್ರಗ್ ಪ್ರಕರಣದ ಕಿಂಗ್‍ಪಿನ್ ಅನಿಕಾಳ ಬಳಿ ಡ್ರಗ್ ಪಡೆದು ಮಾರಾಟ ಮಾಡುತ್ತಿದ್ದ. ಇವರು ಸಾಮಾಜಿಕ ಜಾಲತಾಣದ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದರು.