ಗದಗ: ಕೊರೊನಾ ಲಾಕ್‍ಡೌನ್ ಮಧ್ಯೆ ಗದಗನಲ್ಲಿ ಇಂದು ಸುಮಾರು 50 ಜೋಡಿಗಳು ವಿವಾಹ ಮಾಡಿಕೊಂಡಿದ್ದು, ಸರಳ ವಿವಾಹದಲ್ಲಿ ಪೊಲೀಸರು ಸಹ ಭಾಗವಹಿಸಿ ಹಾರೈಸಿದ್ದಾರೆ.
Advertisement
ಒಂದೆಡೆ ಲಾಕ್‍ಡೌನ್ ಕರ್ಫ್ಯೂ, ಮತ್ತೊಂದೆಡೆ ಸಾಲು ಸಾಲು ವಿವಾಹಗಳು ನಡೆಯುತ್ತಿವೆ. ಶುಭ ಭಾನುವಾರ ಇರುವುದರಿಂದ ಜಿಲ್ಲೆಯಲ್ಲಿ ಇಂದು ಸುಮಾರು 50 ಜೋಡಿ ಸರಳ ವಿವಾಹ ನಡೆದಿವೆ. ವಿವಾಹ ನಡೆಯುವ ಹಳ್ಳಿ ಹಳ್ಳಿಗಳಲ್ಲಿ ಪೊಲೀಸರೇ ಮುಂದೆ ನಿಂತು ಸರಳವಾಗಿ ನಡೆಯಲು ಸಹಕಾರ ನೀಡಿದ್ದಾರೆ.
Advertisement
ನಗರ ಹಾಗೂ ತಾಲೂಕಿನ ಹೊಂಬಳ, ಹುಲಕೋಟಿ, ಕುರ್ತಕೋಟಿ, ಬೆಳಹೊಡ, ಚಿಕ್ಕ ಹಂದಿಗೋಳ, ಕದಡಿ, ಬಳಗಾನೂರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸುಮಾರು 50 ಜೋಡಿಗಳು ಕೊರೊನಾದ ಲಾಕ್‍ಡೌನ್ ನಡುವೆಯೂ ದಾಂಪತ್ಯಕ್ಕೆ ಕಾಲಿಟ್ಟಿವೆ. ಗ್ರಾಮೀಣ ಭಾಗದಲ್ಲಿ ನಡೆದ ಮದುವೆಗೆ ಗದಗ ಗ್ರಾಮೀಣ ಪಿ.ಎಸ್ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಮದುವೆ ನಡೆದವು.
Advertisement
Advertisement
ಸರ್ಕಾರದ ನಿಯಮಗಳನ್ನು ಪಾಲಿಸಿ, ಕಡಿಮೆ ಜನಸಂಖ್ಯೆ, ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಧರಿಸಿ ಸಪ್ತದಿ ತುಳಿದರು. ವಧು-ವರರ ಸಂಬಂಧಿಗಳು ಸಹ ಸಾಮಾಜಿಕ ಅಂತರ ಕಾಯ್ದುಕೊಂಡು ಅಕ್ಷತೆ ಹಾಕಿ ಆಶಿರ್ವಧಿಸಿದರು. ಕೊರೊನಾ ಅಟ್ಟಹಾಸಕ್ಕೆ ಮದುವೆ ಸಂಭ್ರಮಗಳು ಕಳೆಗುಂದಿವೆ. ಜೊತೆಗೆ ಆಡಂಬರಕ್ಕೂ ಕಡಿವಾಣ ಬೀಳುತ್ತಿದೆ.