– ವಿದೇಶಿ ಮಾದರಿ, ರಾಜ್ಯದಲ್ಲೇ ಪ್ರಥಮ ಪ್ರಯತ್ನ
ಮಂಗಳೂರು: ಕೊರೊನಾ ಎಫೆಕ್ಟ್‍ನಿಂದಾಗಿ ಮಂಗಳೂರಿನಲ್ಲಿ ಖಾಸಗಿ ಬಸ್‍ಗಳು ಕ್ಯಾಶ್‍ಲೆಸ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಈ ಮೂಲಕ ಸುಗಮ ಪ್ರಯಾಣಕ್ಕೆ ಅನುಕೂಲವಾಗಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನ ಖಾಸಗಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ವ್ಯವಹಾರಕ್ಕೆ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಚಾರ ನಡೆಸುವುದು ಖಾಸಗಿ ಬಸ್‍ಗಳು. ಆದರೆ ಲಾಕ್‍ಡೌನ್ ನಿಂದ ಎರಡು ತಿಂಗಳುಗಳ ಕಾಲ ಸಂಚಾರ ನಡೆಸದೇ ನಿಂತಿದ್ದ ಖಾಸಗಿ ಬಸ್‍ಗಳು ಮತ್ತೆ ಸಂಚಾರ ಆರಂಭಿಸುತ್ತಿವೆ. ಆದರೆ ಖಾಸಗಿ ಬಸ್‍ಗಳಲ್ಲಿ ಇನ್ನು ಕ್ಯಾಶ್‍ಲೆಸ್ ವಹಿವಾಟು ನಡೆಯಲಿದೆ.
Advertisement
Advertisement
ಬಸ್‍ನಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಗೆ ಉಚಿತವಾಗಿ ಡಿಜಿಟಲ್ ಕಾರ್ಡ್ ಹಂಚಿಕೆ ಮಾಡಲಾಗುತ್ತಿದೆ. ನಂತರ ಪ್ರಯಾಣಿಕರು ಈ ಕಾರ್ಡ್ ಗೆ ರೀಚಾರ್ಜ್ ಮಾಡಿ ಖಾಸಗಿ ಬಸ್ ಗಳಲ್ಲಿ ಸಂಚಾರ ಮಾಡಬಹುದಾಗಿದೆ. ಪ್ರಯಾಣದ ಸಂದರ್ಭದಲ್ಲಿ ನಿರ್ವಾಹಕರ ಹತ್ತಿರದ ಮೆಷೀನ್ ಗೆ ಕಾರ್ಡ್ ತೋರಿಸಿದರೆ. ಸೆನ್ಸಾರ್ ಮೂಲಕ ಟಿಕೆಟ್ ದರ ಕಡಿತಗೊಳ್ಳುತ್ತದೆ. ಕೊರೊನಾ ವೇಗವಾಗಿ ಹರಡುತ್ತಿರುವ ಈ ಸಂಧರ್ಭದಲ್ಲಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಚಿಲ್ಲರೆ ಕಿರಿಕಿರಿ ಕೂಡ ತಪ್ಪಿದಂತಾಗುತ್ತದೆ.