ಭುವನೇಶ್ವರ: ಭಾರತದ ಓಟಗಾರ್ತಿ ದ್ಯುತಿ ಚಂದ್ ತರಬೇತಿಯ ವೆಚ್ಚಕ್ಕಾಗಿ ತಮ್ಮ ಬಳಿ ಇದ್ದ ಬಿಎಂಡಬ್ಲೂ ಕಾರನ್ನು ಮಾರಾಟಕ್ಕಿಟ್ಟಿದ್ದಾರೆ.
ಚೀನಿ ವೈರಸ್ ಕಾರಣದಿಂದ ವಿಶ್ವದಾದ್ಯಂತ ಕಳೆದ 4 ತಿಂಗಳನಿಂದ ಕ್ರೀಡಾ ಜಗತ್ತು ಸ್ತಬ್ಧಗೊಂಡಿದೆ. ವೈರಸ್‍ನಿಂದ ಐಪಿಎಲ್ ಸೇರಿದಂತೆ ಹಲವು ಕ್ರೀಡೆಗಳ ಟೂರ್ನಿಗಳು ಮುಂದೂಡಿದ್ದರೆ, ಹಲವು ಟೂರ್ನಿಗಳು ರದ್ದಾಗಿದೆ. ಟೋಕಿಯೋ ಒಲಿಂಪಿಕ್ಸ್ ಕೂಡ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಒಲಿಂಪಿಕ್ಸ್ ಮುಂದೂಡಿರುವ ಹಿನ್ನೆಲೆಯಲ್ಲಿ ತರಬೇತಿಯನ್ನು ಮುಂದುವರಿಸಿರುವ ದ್ಯುತಿ ಚಂದ್ ತರಬೇತಿಗಾಗಿ ತಮ್ಮ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಕಾರು ಮಾರಾಟ ಮಾಡುತ್ತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು.
ಇಲ್ಲಿಯವರೆಗೂ ನನ್ನ ಶಿಕ್ಷಣ ಅತ್ಯುತ್ತಮವಾಗಿಸಾಗಿದೆ. ಭುವನೇಶ್ವರದಲ್ಲಿ ನಾನು ತರಬೇತಿ ಪಡೆಯುತ್ತಿದ್ದು, ಸರ್ಕಾರ ಹಾಗೂ ಪ್ರಯೋಜಕರು ನೀಡಿದ್ದ ಹಣ ಖಾಲಿಯಾಗಿದೆ. ಆದ್ದರಿಂದಲೇ ನನ್ನ ಕಾರನ್ನು ಮಾರಾಟ ಮಾಡಬೇಕೆಂದುಕೊಂಡಿದ್ದೇನೆ ಯಾರಾದರೂ ಖರೀದಿ ಮಾಡುವವರಿದ್ದರೆ ನನಗೆ ಸಂದೇಶ ರವಾನಿಸಿ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು.
ಇತ್ತ ದ್ಯುತಿ ಚಂದ್ ಫೇಸ್‍ಬುಕ್ ಪೋಸ್ಟ್ ಬಳಿಕ ಒಡಿಶಾ ಸರ್ಕಾರ ಅವರ ನೆರವಿಗೆ ಆಗಮಿಸಿತ್ತು. ಪರಿಣಾಮ ಅವರು ಫೇಸ್‍ಬುಕ್ ಪೋಸ್ಟನ್ನು ದ್ಯುತಿ ಚಂದ್ ಡಿಲೀಟ್ ಮಾಡಿದ್ದಾರೆ. ಉಳಿದಂತೆ 2015ರಲ್ಲಿ ಬಿಎಂಡಬ್ಲೂ 3 ಸಿರೀಸ್ ಮಾಡೆಲ್ ಕಾರನ್ನು 40 ಲಕ್ಷ ರೂ.ಗಳಿಗೆ ದ್ಯುತಿ ಚಂದ್ ಖರೀದಿ ಮಾಡಿದ್ದರು.
ಟೋಕಿಯೋ ಒಲಪಿಂಕ್ ತರಬೇತಿಗಾಗಿ ಸರ್ಕಾರ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿತ್ತು. ಕೋಚ್, ಫಿಜಿಯೋಥೆರಪಿಸ್ಟ್, ಡಯಟಿಷಿಯನ್ ಸೇರಿದಂತೆ ತಿಂಗಳಿಗೆ 5 ಲಕ್ಷ ರೂ. ಖರ್ಚಾಗುತ್ತಿತ್ತು. ಕೊರೊನಾ ಕಾರಣದಿಂದ ಯಾವ ಪ್ರಯೋಜಕರು ಕೂಡ ನನಗಾಗಿ ಖರ್ಚು ಮಾಡಲು ಮುಂದೆ ಬರುತ್ತಿಲ್ಲ. ಸದ್ಯ ನಾನು ಟೋಕಿಯೋ ಒಲಂಪಿಕ್‍ಗೆ ಸಿದ್ಧವಾಗುತ್ತಿದ್ದೇನೆ. ಜರ್ಮಿನಿಯಲ್ಲಿ ತರಬೇತಿ ಪಡೆಯಲು, ಫಿಟ್ನೆಸ್ ಕಾಯ್ದುಕೊಳ್ಳಲು ಹಣ ಅಗತ್ಯವಿದೆ. ಆದ್ದರಿಂದಲೇ ಕಾರು ಮಾರಾಟ ಮಾಡಲು ಮುಂದಾಗಿದ್ದೆ ಎಂದು ದ್ಯುತಿ ಚಂದ್ ಸಂದರ್ಶನವೊಂದರಲ್ಲಿ ಹೇಳಿದ್ದರು.
2020ರ ಅರ್ಜನ ಪ್ರಶಸ್ತಿಗೆ ದ್ಯುತಿ ಚಂದ್ ಆಯ್ಕೆ ಆಗಿದ್ದು, 2018ರ ಏಷ್ಯನ್ ಗೇಮ್ಸ್ ನಲ್ಲಿ 2 ಬೆಳ್ಳಿ ಪದಕಗಳನ್ನು ಗೆದ್ದು ತಂದಿದ್ದರು. ಲಾಕ್‍ಡೌನ್ ಕಾರಣದಿಂದ ತರಬೇತಿಯಿಂದ ದೂರ ಉಳಿದಿದ್ದ ದ್ಯುತಿ ಚಂದ್ ಮೇ 25 ರಿಂದ ತರಬೇತಿ ಆರಂಭಿಸಿದ್ದರು. ಸದ್ಯ ಒಲಂಪಿಕ್ ಮುಂದೂಡಿರುವುದರಿಂದ ಅವರು ಒಂದು ವರ್ಷ ತರಬೇತಿಯನ್ನು ಮುಂದುವರಿಸಬೇಕಿದೆ.