– ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್
ದುಬೈ: ಕೊರೊನಾ ಹಿನ್ನೆಲೆ ದುಬೈನಲ್ಲಿ ನೆಲೆಸಿರುವ ಕೇರಳ ಮೂಲದ ಜೋಡಿ ಡ್ರೈವ್ ಬೈ ವೆಡ್ಡಿಂಗ್ ಮೊರೆ ಹೋಗಿ, ಅದೇ ರೀತಿ ಮದುವೆ ಆಗಿದ್ದಾರೆ. ಜೋಡಿಯ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕೊರೊನಾ ಕಾಲದಲ್ಲಿಯೂ ವಿಭಿನ್ನವಾಗಿ ಮದುವೆ ಆಗಿದ್ದಾರೆ ಎಂದು ನೆಟ್ಟಿಗರು ಸೂಚಿಸಿದ್ದಾರೆ.
Advertisement
ಕೇರಳ ಮೂಲದ ಮಹ್ಮದ್ ಜಝೀಮ್ ಮತ್ತು ಅಲ್ಮಾಸ್ ಅಹ್ಮದ್ ಡ್ರೈವ್ ಬೈ ವೆಡ್ಡಿಂಗ್ ಮೂಲಕ ದುಬೈನ ಜುಮೈರಾದಲ್ಲಿ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕೋವಿಡ್ ಕಾರಣದಿಂದ ಎರಡೂ ಕುಟುಂಬಗಳು ಆಪ್ತರು ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು.
Advertisement
Advertisement
ಏನಿದು ಡ್ರೈವ್ ಬೈ ವೆಡ್ಡಿಂಗ್?: ನವ ಜೋಡಿ ಮನೆಯ ಮುಂದೆ ಅಲಂಕರಿಸಿ ವೇದಿಕೆಯಲ್ಲಿ ನಿಂತಿರುತ್ತಾರೆ. ಕಾರ್ ನಲ್ಲಿ ಬರೋ ಅತಿಥಿಗಳು ವೇದಿಕೆ ಮುಂದೆ ನಿಂತು ಶುಭ ಕೋರುತ್ತಾರೆ. ದೂರದಿಂದಲೇ ನಿಂತು ದಂಪತಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತೆರಳುತ್ತಾರೆ.
Advertisement
ನಾವು ಮದುವೆಗೆ ಆಹ್ವಾನಿಸುವಾಗಲೇ ಅತಿಥಿಗಳಿಗೆ ಡ್ರೈವ್ ಬೈ ವೆಡ್ಡಿಂಗ್ ಮಾಹಿತಿ ನೀಡಿದ್ದೇವು. ಅತಿಥಿಗಳು ಕಾರ್ ನಿಂದ ಕೆಳಗೆ ಇಳಿಯದೇ ದೂರದಿಂದಲೇ ವಿಶ್ ಮಾಡಿದ ಕೂಡಲೇ ಹೊರಡಬೇಕು. ಅತಿಥಿಗಳು ಹೆಚ್ಚು ಸಮಯ ನಿಂತರೆ ಟ್ರಾಫಿಕ್ ಜಾಮ್ ಉಂಟಾಗುವದರಿಂದ ಬೇಗ ಹೋಗಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು ಎಂದು ನವ ದಂಪತಿ ಹೇಳಿದ್ದಾರೆ.
ಜಝೀಮ್ ಮತ್ತು ಅಲ್ಮಾಸ್ ಬಾಲ್ಯದಿಂದಲೂ ಪರಿಚಯ. ಎರಡೂ ಕುಟುಂಬಗಳು ಆಪ್ತವಾಗಿದ್ದು, ಇಬ್ಬರ ಮದುವೆ ನಿಶ್ಚಯಿಸಿದ್ದರು. ಜಝೀಮ್ ಎಮಿರೇಟ್ಸ್ ಏರ್ ಲೈನ್ಸ್ ನಲ್ಲಿ ಏರೊನಾಟಿಕಲ್ ಇಂಜಿನೀಯರ್ ಆಗಿದ್ದು, ಅಲ್ಮಾಸ್ ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿನಿ.