– ಅತಿಥಿಗಳು ಮನೆಯೊಳಗೆ ಬರುವಂತಿಲ್ಲ
ಬ್ರಸೆಲ್: ಅತಿಥಿಗಳು ಕ್ರಿಸ್‍ಮಸ್ ಆಚರಣೆಗೆ ಮನೆಗೆ ಬರಬಹುದು. ಆದರೆ ಬಾತ್ ರೂಮ್ ಬಳಸೋಕೆ ಒಬ್ಬರಿಗೆ ಮಾತ್ರ ಅವಕಾಶ ಎಂದು ಬ್ರೆಸೆಲ್ಸ್ ಸರ್ಕಾರ ಹೊಸ ರೂಲ್ಸ್ ಮಾಡಿದೆ.
ಬೆಲ್ಜಿಯಂನಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಲಾಕ್‍ಡೌನ್ ಜಾರಿಗೊಳಿಸಿದೆ. ಈ ಸಮಯದಲ್ಲಿ ಕ್ರಿಸ್‍ಮಸ್ ಬಂದಿರುವುದರಿಂದ ಹಬ್ಬದ ಆಚರಣೆಗೆ ಅನುಮತಿ ನೀಡಿ ಸರ್ಕಾರ ಇಂತಹ ವಿಚಿತ್ರ ರೂಲ್ಸ್‍ವೊಂದನ್ನು ಹಾಕಿದೆ.
Advertisement
Advertisement
ಕ್ರಿಸ್‍ಮಸ್ ಆಚರಣೆಗೆ ಬಂದಿರುವ ಅತಿಥಿಗಳು ಯಾರು ಮನೆ ಒಳಗೂ ಬರುವಂತಿಲ್ಲ. ಮನೆಯ ಹೊರಗೆ ಪಾರ್ಟಿ ಮಾಡಬೇಕು. ಪಾರ್ಟಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಬಂದಿರುವ ಅತಿಥಿಗಳಲ್ಲಿ ಒಬ್ಬರಿಗೆ ಮಾತ್ರ ಮನೆ ಒಳಗೆ ಹೋಗಲು ಅವಕಾಶ ಇರುತ್ತದೆ. ಆ ಒಬ್ಬ ಅತಿಥಿಗೆ ಮಾತ್ರ ಮನೆಯ ಬಾತ್‍ರೂಮ್ ಬಳಸಲು ಅವಕಾಶ ಇರುತ್ತದೆ ಎಂದು ವಿಚಿತ್ರ ನಿಯಮವನ್ನು ಹಾಕುವ ಮೂಲಕವಾಗಿ ಹಬ್ಬದ ಸೆಲೆಬ್ರೆಷನ್‍ಗೆ ಅನುಮತಿ ನೀಡಿದೆ.
Advertisement
Advertisement
ಕ್ರಿಸ್‍ಮಸ್ ಆಚರಣೆಗೆ ಅಗತ್ಯ ಇರುವ ಸರಕು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಜನರು ಗುಂಪು ಸೇರುವಂತಿಲ್ಲ.ನೆವೆಂಬರ್ ನಿಂದ ಎರಡನೇ ಹಂತದ ಲಾಕ್‍ಡೌನ್ ಜಾರಿಯಾಗಿದೆ ಇದು ಫೆಬ್ರವರಿವರೆಗೂ ಜಾರಿಯಲ್ಲಿರಲಿದೆ ಎಂದು ಬ್ರಸೆಲ್‍ನ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.