– ಬ್ರೀಮ್ಸ್ ಆಸ್ಪತ್ರೆಯ ಕರ್ಮಕಾಂಡ ಬಯಲು
ಬೀದರ್: ಬ್ರೀಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲವೆ ಎಂಬ ಪ್ರಶ್ನೆ ಮೂಡಿದೆ. ಯಾಕಂದರೆ ಬ್ರೀಮ್ಸ್ ಆಸ್ಪತ್ರೆಯ ಸೋಂಕಿತರಿಗೆ ಮನೆ ಹಾಗೂ ಹೋಟೆಲ್ ಊಟ ನೀಡಲು ಸಂಬಂಧಿಕರು ಕ್ಯೂ ಬರುತ್ತಿರುವ ದೃಶ್ಯ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
Advertisement
ಭದ್ರತಾ ಗೇಟ್ ನಿಂದ ಒಳಗೆ ಹೋಗಿ ಕೂಗಳತೆಯಲ್ಲಿ ಸೋಂಕಿತರಿಗೆ ಊಟ ನೀಡಿ ಸಂಬಂಧಿಕರು ಮಾತನಾಡಿಸಿಕೊಂಡು ಬರುತ್ತಿದ್ದಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಪಬ್ಲಿಕ್ ಟಿವಿ ಮಾಡಿದ ರಹಸ್ಯ ಕಾರ್ಯಾಚರಣೆಯಲ್ಲಿ ಸಂಬಂಧಿಕರೇ ಒಳಗೆ ಸರಿಯಾದ ಊಟ ನೀಡುತ್ತಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.
Advertisement
Advertisement
ಕೊರೊನಾ ವಿಶೇಷ ವಾರ್ಡಿನಲ್ಲಿರುವ ಸೋಂಕಿತರಿಗೆ ಪೌಷ್ಠಿಕಯುಕ್ತ ಆಹಾರ ನೀಡಬೇಕು ಎಂದು ರಾಜ್ಯ ಸರ್ಕಾರ ಮೆನು ಚಾಟ್ ಬಿಡುಗಡೆ ಮಾಡಿದೆ. ಆದರೆ ಸೋಂಕಿತ ಮಗಳ ತಂದೆ, ಬ್ರೀಮ್ಸ್ ನಲ್ಲಿ ಉಪ್ಪು-ಖಾರವಿಲ್ಲದ ಆಹಾರ ನೀಡುತ್ತಾರೆ ಎಂಬ ಸತ್ಯವನ್ನು ಬಹಿರಂಗ ಪಡೆಸಿದ್ದಾರೆ. ಕೊರೊನಾ ವಿಶೇಷ ವಾರ್ಡಿನಲ್ಲಿರುವ ಬಹುತೇಕ ಸೋಂಕಿತರಿಗೆ ಮನೆಯಿಂದ ಹಾಗೂ ಹೋಟೆಲ್‍ಗಳಿಂದ ಬಿಸಿ ಬಿಸಿ ಉಪಹಾರ, ಊಟ ತಂದು ಸಂಬಂಧಿಕರು ನೀಡುತ್ತಿದ್ದಾರೆ. ಸೋಂಕಿತರ ವಾರ್ಡಿನ ಮುಂಭಾಗ ಭದ್ರತಾ ಸಿಬ್ಬಂದಿ ಇದ್ದರೂ ಸಂಬಂಧಿಕರು ಸೋಂಕಿತರ ಬಳಿ ಹೋಗಿ ಊಟ ನೀಡಿ ಮಾತನಾಡಿಕೊಂಡು ಬರುತ್ತಿದ್ದಾರೆ. ಹೀಗೆ ಕೂಗಳತೆ ದೂರದಲ್ಲಿ ನಿಂತು ಮಾತನಾಡುತ್ತಿದ್ದರೂ ಸಿಬ್ಬಂದಿ ಮಾತ್ರ ನೋಡಿಯೂ ನೋಡದಂತಿರುತ್ತಿದ್ದಾರೆ. ಈ ಎಕ್ಸ್‍ಕ್ಲೂಸಿವ್ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
Advertisement
ಸೋಂಕಿತ ಮಗಳಿಗೆ ಊಟ ನೀಡಲು ಬಂದ ತಂದೆಯ ಬಳಿ ಪಬ್ಲಿಕ್ ಟಿವಿ ಮಾತನಾಡಿದಾಗ, ಬ್ರೀಮ್ಸ್‍ನ ಅಸಲಿ ಕಥೆ ಬಹಿರಂಗವಾಗಿದೆ. ಏನ್ ಸರ್ ಒಳಗಡೆ ಊಟ ನೀಡಲ್ವಾ? ಯಾಕೆ ನೀವು ತಂದಿರೋದು ಅಂತ ಪ್ರಶ್ನಿಸಿದಾಗ, ಇಲ್ಲಾ ಸರ್ ಒಳಗೆ ನೀಡೋ ಆಹಾರದಲ್ಲಿ ಉಪ್ಪು ಇಲ್ಲಾ ಖಾರವೂ ಇಲ್ವಂತೆ. ನಿನ್ನೆ ನನ್ನ ಮಗಳು ಫೋನ್ ಮಾಡಿದಾಗ ಹೇಳಿದ್ದಾಳೆ ಸರ್ ಎಂದು ಬ್ರೀಮ್ಸ್ ನ ವಿಶೇಷ ವಾರ್ಡಿನ ಅಸಲಿ ಕಥೆ ಬಿಚ್ಚಿಟ್ಟರು.
ಎರಡು ದಿನಗಳಲ್ಲಿಂದ ನಿಮ್ಮ ಪಬ್ಲಿಕ್ ಟಿವಿ ಪಾಲೋಅಪ್ ಮಾಡಿ ನೋಡಿದಾಗಿ ಸಾಕಷ್ಟು ಜನ ಸೋಂಕಿತರಿಗೆ ಊಟ ನೀಡಲು ಸಂಬಂಧಿಕರು ಬರುತ್ತಿದ್ದಾರೆ. ಕೆಲವರು ಒಳಗೆ ಹೋಗಿ ಊಟ ಕೊಟ್ಟು ಮಾತನಾಡಿಸಿ ಬರುತ್ತಿದ್ದಾರೆ. ಇನ್ನೂ ಕೆಲವುರು ಆಸ್ಪತ್ರೆಯ ಹಿಂದುಗಡೆ ಹೋಗಿ ಕಿಟಕಿಯಿಂದ ಸೋಂಕಿತರ ಸಂಬಂಧಿಕರನ್ನು ಮಾತನಾಡಿಸಿ ಬರುತ್ತಿದ್ದಾರೆ. ನಂತರ ಅವರು ಹೊರಗಡೆ ಬಂದು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು ಇವರು ಸೋಂಕು ಹರಡಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದರೂ ಅಲ್ಲಿಯೇ ಇರುವ ಸಿಬ್ಬಂದಿ ಮಾತ್ರ ಕಂಡರೂ ಕಾಣದಂತೆ ವರ್ತನೆ ಮಾಡಿ ಮಹಾಮಾರಿ ಹರಡುವಿಕೆಗೆ ಸಹಾಯ ಮಾಡುತ್ತಿದ್ದಾರೆ.
ಆಸ್ಪತ್ರೆಯ ಒಳಗಡೆ ಸೋಂಕಿತರಿಗೆ ಸರಿಯಾದ ಆಹಾರ ಸಿಗದ ಕಾರಣ ಸೋಂಕಿತರು ಹೊರಗಡೆಯಿಂದ ಊಟ ತರಿಸಿಕೊಳ್ಳುತ್ತಿದ್ದಾರೆ ಎಂಬ ಮಾತಿದೆ. ಈ ಬಗ್ಗೆ ಬ್ರೀಮ್‍ನ ಸೂಪರಿಡೆಂಟ್ ಅವರನ್ನು ಕೇಳಿದ್ರೆ, ಡಬ್ಬದಲ್ಲಿ ಆಹಾರ ನೀಡಲು ಪರವಾನಿಗೆ ಇಲ್ಲ. ಸೋಂಕಿತರು ಇಲ್ಲಿನ ಆಹಾರ ಟೇಸ್ಟ್ ಇಲ್ಲಾ ಎಂದು ಹೊರಗಡೆಯಿಂದ ಊಟ ತರಿಸಿಕೊಳ್ಳುತ್ತಿದ್ದಾರೆ. ಒಳಗಡೆ ಹೋಗೋಕೆ ಸಾಧ್ಯನೇ ಇಲ್ಲ. ಯಾಕೆಂದ್ರೆ ಇಲ್ಲಿ ಪೊಲೀಸ್ ಭದ್ರತೆ ಇದೆ ಎಂದು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಬ್ರೀಮ್ಸ್ ಆಸ್ಪತ್ರೆ ಪದೇ ಪದೇ ಎಡವಟ್ಟು ಮಾಡಿಕೊಳ್ಳುತ್ತಾ ಒಂದಲ್ಲಾ ಒಂದು ಸುದ್ದಿಯಲ್ಲಿರುತ್ತೆ. ಆದರೆ ಈ ಬಾರಿ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಾದ್ಯಂತ ಸೋಂಕು ಹರಡಿಸುವ ಸಾಧ್ಯತೆ ಇದೆ ಎಂಬ ಸುದ್ದಿಯಲ್ಲಿದೆ.