ಮಡಿಕೇರಿ: ಕೊರೊನಾ ಮಹಾಮಾರಿಗೆ ಜನರು ತತ್ತರಿಸಿಹೋಗುತ್ತಿದ್ದಾರೆ. ಸೋಂಕು ಇರುವವರಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಇರಲಿ ಸರಿಯಾ ಊಟವು ಸಿಗುತ್ತಿಲ್ಲ ಎಂದು ಸೋಂಕಿತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
Advertisement
ಪಾಸಿಟಿವ್ ಬಂದು ರೋಗಿಗಳಿಗೆ ಅಸ್ಪತ್ರೆಗಳಲ್ಲೆ ಊಟ ಬಿಸಿನೀರು ಎಲ್ಲಾ ವ್ಯವಸ್ಥೆ ಅಸ್ಪತ್ರೆಯಿಂದ ಮಾಡಲಾಗುತ್ತಿದೆ. ಅದರೆ, ಇದೀಗ ಅಸ್ಪತ್ರೆಯ ಕರ್ಮಕಾಂಡವನ್ನು ಸೋಂಕಿತರು ಬಿಚ್ಚಿಟ್ಟಿದ್ದಾರೆ. ಮಡಿಕೇರಿ ನಗರದಲ್ಲಿ ಇರುವ ಕೋವಿಡ್ ಆಸ್ಪತ್ರೆಯಲ್ಲಿ ರಾತ್ರಿ ಹತ್ತು ಗಂಟೆಯಾದರೂ ಸೋಂಕಿತರಿಗೆ ಸರಿಯಾಗಿ ಊಟ ಸಿಗುತ್ತಿಲ್ಲವಂತೆ. ಹತ್ತು ಗಂಟೆಗೆ ಹಳಸಿದ ಅನ್ನ ಕೊಡುತ್ತಿದ್ದಾರಂತೆ. ರಾತ್ರಿ ಹತ್ತುಗಂಟೆಗೆ ಊಟ ಕೊಡುತ್ತಿದ್ದೀರಲ್ಲ ಇದು ಸರಿನಾ ಎಂದು ಸೋಂಕಿತರೊಬ್ಬರು ಊಟ ಕೊಡಲು ಬಂದ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.
Advertisement
Advertisement
ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಊಟ ನೀಡುವುದಿಲ್ಲ. ಕೊಟ್ಟರು ಊಟ ಹಳಸಿಹೋಗಿರುತ್ತದೆ. ಹೀಗಾಗಿ ಅಲ್ಲಿಯ ಸೋಂಕಿತರು ರೋಗಿಗಳು ಊಟ ಕೊಟ್ಟ ಎರಡು ನಿಮಿಷಕ್ಕೆ ಎಲ್ಲರೂ ಊಟ ಎಸೆಯಬೇಕಾಯಿತ್ತೆಂದು ಸೋಂಕಿತರ ಅಳಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸೋಂಕಿತ ರೋಗಿಗಳಲ್ಲಿ ಬಹುತೇಕರಿಗೆ ಶುಗರ್ ಇರುವುದರಿಂದ ಹತ್ತು ಗಂಟೆಗೆ ಹಳಸಿದ ಅನ್ನ ಕೊಟ್ಟರೆ ಹೇಗೆ ತಿನ್ನಲು ಸಾಧ್ಯ ಎಂದು ಅಲ್ಲಿನ ಸಿಬ್ಬಂದಿಗಳನ್ನು ಪ್ರಶ್ನೆ ಮಾಡಿ ಆಸ್ಪತ್ರೆಯ ಕರ್ಮಕಾಂಡವವನ್ನು ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ.
Advertisement
ಸಾಕಷ್ಟು ಹಣ ಕೋವಿಡ್ ಸೋಂಕಿತರಿಗೆ ಖರ್ಚುಮಾಡುತ್ತಿದ್ದಾರೆ. ಸಾಕಷ್ಟು ಬೀಲ್ ಅನ್ನು ಆಸ್ಪತ್ರೆಯವರು ಮಾಡುತ್ತಾರೆ. ಅದರೆ ಸೋಂಕಿತರಿಗೆ ಸರಿಯಾದ ಊಟದ ವ್ಯವಸ್ಥೆಯೇ ಇರುವುದಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.