– ಕೆಸಿ ಜನರಲ್, ಯಲಹಂಕದಲ್ಲಿ ಸಾಲು ಸಾಲು ಕ್ಯೂ
ಬೆಂಗಳೂರು: ಚೀನಿ ವೈರಸ್ ಕೊರೊನಾ ಭಾರತಕ್ಕೆ ಕಾಲಿಟ್ಟ ಬಳಿಕ ಸಾಕಷ್ಟು ಅವಾಂತರಗಳು ಸಂಭವಿಸುತ್ತಿದೆ. ದೇಶದಲ್ಲಿ ಸಾವು-ನೋವುಗಳ ಸಂಖ್ಯೆಯೂ ಹೆಚ್ಚಾಗಿದೆ. ಇಷ್ಟು ದಿನ ಮಾಸ್ಕ್, ಸ್ಯಾನಿಟೈಸರ್ ಬಸುತ್ತಿದ್ದ ಜನ ಜೊತೆಗೆ ಇದೀಗ ವ್ಯಾಕ್ಸಿನ್ ಗಾಗಿ ಮುಗಿಬೀಳುತ್ತಿದ್ದಾರೆ.
Advertisement
ಹೌದು. ವ್ಯಾಕ್ಸಿನ್ ಸಿಗೋದಿಲ್ಲ ಅಂತ ಭಯ ಬಿದ್ದ ಜನ ಇಂದು ಬೆಳ್ಳಂಬೆಳಗ್ಗೆ ವ್ಯಾಕ್ಸಿನ್ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಮುಂಜಾನೆ 4 ಗಂಟೆಯಿಂದಲೇ ಜನ ಸಾಲು ಗಟ್ಟಿ ನಿಂತಿದ್ದಾರೆ. ಯಲಹಂಕ ಲಸಿಕಾ ಕೇಂದ್ರದಲ್ಲಿ ಲಸಿಕೆಗಾಗಿ ಜನ ಗಲಾಟೆಯೇ ಮಾಡಿದ್ದಾರೆ. ಮೊದಲು ಬಂದಿದ್ದು ನಾನು, ನನಗೆ ಲಸಿಕೆ ಹಾಕಿ ಎಂದು ಸಾರ್ವಜನಿಕರು ಲಸಿಕಾ ಕೇಂದ್ರದಲ್ಲಿ ಕಿತ್ತಾಡಿಕೊಂಡಿದ್ದಾರೆ.
Advertisement
Advertisement
ಇತ್ತ ದೇಶಾದ್ಯಂತ ಕೊರೊನಾ ವ್ಯಾಕ್ಸಿನ್ ಶಾರ್ಟೆಜ್ ಉಂಟಾಗಿದ್ದು, ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಕೊರೊನಾ ವ್ಯಾಕ್ಸಿನ್ ಶಾರ್ಟೆಜ್ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ.
Advertisement
ಸದ್ಯದ ಕೊರೊನಾ ಪರಿಸ್ಥಿತಿ ಬಗ್ಗೆ ಮೋದಿ ಮಾಹಿತಿ ಪಡೆಯಲಿದ್ದಾರೆ. ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಸದ್ಯದ ಪರಿಸ್ಥಿತಿ ವಿವರಣೆ ನೀಡಲಿದ್ದಾರೆ. ವ್ಯಾಕ್ಸಿನ್ ಅಭಾವ ಮತ್ತು ಪರ್ಯಾಯ ಕ್ರಮಗಳ ಬಗ್ಗೆ ಹಾಗೂ ವಾಯುಸೇನೆ ಮೂಲಕ ಸಾಗಿಸುತ್ತಿರುವ ಆಕ್ಸಿಜನ್ ಬಗ್ಗೆಯೂ ವರದಿ ನೀಡಲಿದ್ದಾರೆ.
ಆಕ್ಸಿಜನ್ ಪೂರೈಕೆ ಮಾಹಿತಿ ನೀಡಲಿರುವ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವರಿಂದ ಲಾಕ್‍ಡೌನ್ ವ್ಯವಸ್ಥೆ, ಕೋವಿಡ್ ಕಂಟ್ರೋಲ್ ಬಗ್ಗೆ ವರದಿ ನೀಡಲಿದ್ದಾರೆ. ಇತ್ತ ಡಿ.ವಿ.ಸದಾನಂದಗೌಡರಿಂದ ರೆಮ್ಡೆಸಿವಿರ್ ಬೇಡಿಕೆ ಮತ್ತು ಪೂರೈಕೆ ಬಗ್ಗೆ, ಪಿಯೋಷ್ ಗೊಯೇಲ್‍ರಿಂದ ರೈಲಿನಲ್ಲಿ ಸಾಗಾಟವಾಗ್ತಿರುವ ಆಕ್ಸಿಜನ್ ಬಗ್ಗೆ ಹೀಗೆ ಸಚಿವರಿಂದ ವಿಭಾಗವಾರು ಮಾಹಿತಿಯನ್ನು ನರೇಂದ್ರ ಮೋದಿ ಪಡೆದುಕೊಳ್ಳಿದ್ದಾರೆ.