ಬೆಂಗಳೂರು: ವ್ಯಕ್ತಿಯೊಬ್ಬ ಲೈವ್ ಸೂಸೈಡ್ ಮಾಡಿಕೊಂಡ ಘಟನೆ ಬೆಂಗಳೂರಿನ ಮಂಜುನಾಥ ನಗರದಲ್ಲಿ ನಡೆದಿದೆ. ಕೊರೊನಾ, ಆರ್ಥಿಕ ಸಂಕಷ್ಟ ಹಾಗೂ ಹೆಂಡ್ತಿ ಜೊತೆಗಿನ ಜಗಳದಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅನಿಲ್ (28) ಪತ್ನಿ ಜೊತೆ ಜಗಳವಾಡಿಕೊಂಡು ಆತ್ಮಹತ್ಯೆಗೆ ಶರಣಾದ ಪತಿ. ಬಸವೇಶ್ವರ ನಗರದ ಮಂಜುನಾಥ ನಗರಲ್ಲಿ ನಡೆದ ಆತ್ಮಹತ್ಯೆಯ ಲೈವ್ ದೃಶ್ಯವನ್ನು ಅಕ್ಕಪಕ್ಕದ ಮನೆಯವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಮುಂಬೈನಲ್ಲಿದ್ದ ಪತ್ನಿ ಜೊತೆ ಕಿರಿಕ್ ಮಾಡಿಕೊಂಡ ಅನಿಲ್, ಮದ್ಯಪಾನ ಮಾಡಿ ನೇಣಿಗೆ ಶರಣಾಗಿದ್ದಾನೆ. ಕಿಟಕಿ ಮೂಲಕ ಪಕ್ಕದ ಮನೆಯವರು ಬೇಡ ಬೇಡ ಅಂದ್ರೂ ಅನಿಲ್ ಫ್ಯಾನಿಗೆ ಹಗ್ಗ ಹಾಕಿಕೊಂಡೇ ಬಿಟ್ಟಿದ್ದಾನೆ. ನೋಡ ನೋಡ್ತಿದ್ದಂತೆ ಕುತ್ತಿಗೆಗೆ ಹಗ್ಗ ಬಿಗಿದುಕೊಂಡಿದ್ದಾನೆ.
ಅಕ್ಕ ಪಕ್ಕದವರು ಸೇರಿ ಬಾಗಿಲು ಒಡೆಯುವಷ್ಟರಲ್ಲಿ ಅನಿಲ್ ಪ್ರಾಣ ಬಿಟ್ಟಿದ್ದಾನೆ. ಈ ಸಂಪೂರ್ಣ ದೃಶ್ಯವನ್ನು ನೆರೆಮನೆಯವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.