ಹಾಸನ: ಎಲ್ಲಿವರೆಗೂ ಲಾಕ್‍ಡೌನ್ ಇರುತ್ತೋ ಅಲ್ಲಿವರೆಗೂ ಕೊರೊನಾ ಸ್ಥಬ್ಧವಾಗಿದ್ದು, ನಂತರ ಮತ್ತೆ ಕೊರೋನ ವಾಪಸ್ ಬರುತ್ತೆ. ಹೀಗಾಗಿ ಮತ್ತೆ ಲಾಕ್‍ಡೌನ್ ಮಾಡುವುದು ಸಮಸ್ಯೆಗೆ ಪರಿಹಾರ ಅಲ್ಲ ಎಂದು ಶಾಸಕ ಪ್ರೀತಂಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಸನದ ಗಂಧದಕೋಟಿಯಲ್ಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಲಾಕ್‍ಡೌನ್ ಮಾಡಿದ್ರೆ ಸಮಸ್ಯೆ 15 ದಿನ ಪೋಸ್ಟ್ ಪೋನ್ ಆಗುತ್ತೆ ಹೊರತು ಪರಿಹಾರ ಆಗಲ್ಲ. ನನ್ನ ಪ್ರಕಾರ ಸಮಸ್ಯೆಗೆ ಪರಿಹಾರ ಔಷಧಿ. ಅದಕ್ಕಾಗಿ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ ಎಂದರು.
Advertisement
Advertisement
ನಾವು ಕೊರೊನಾದೊಂದಿಗೆ ಜೀವನ ನಡೆಸೋದು ಅನಿವಾರ್ಯ. ಜನರ ಜೀವ ಮುಖ್ಯ. ಆದರೆ ಜನರು ಯಾವೆಲ್ಲ ಕ್ರಮ ಕೈಗೊಳ್ಳಬೇಕು ಅದನ್ನು ಅನುಸರಿಸಬೇಕು. ಮತ್ತೆ ಲಾಕ್‍ಡೌನ್ ಮಾಡಿದ್ರೆ ಕೂಲಿಕಾರ್ಮಿಕರು ಸೇರಿ ಹಲವರಿಗೆ ಸಮಸ್ಯೆಯಾಗಲಿದೆ ಎಂದು ಅಭಿಪ್ರಾಯಿಸಿದರು.
Advertisement
ಸಾರ್ವಜನಿಕರು ಸಾಮಾಜಿಕ ಅಂತರ ಸೇರಿದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಿಯಮ ಅನುಸರಿಸಬೇಕು ಎಂದು ಶಾಸಕ ಪ್ರೀತಂಗೌಡ ಲಾಕ್‍ಡೌನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.