– ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ
ಪಾಟ್ನಾ: ಕೊರೊನಾದಿಂದ ಮೃತ ತಂದೆಯ ಶವ ಪಡೆಯಲು ಮಗ ಮುಂದೆ ಬಾರದ ಹಿನ್ನೆಲೆ ಮುಸ್ಲಿಂ ಯುವಕ ಅಂತ್ಯ ಸಂಸ್ಕಾರ ನೆರವೇರಿಸಿದ್ದಾನೆ. ಬಿಹಾರದ ದರ್ಬಾಂಗ್ ನಲ್ಲಿ ಈ ಘಟನೆ ನಡೆದಿದೆ.
Advertisement
ದರ್ಬಾಂಗ್ ನಗರದ ಡಿಎಂಸಿಎಚ್ ಆಸ್ಪತ್ರೆಗೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ನಿವೃತ್ತ ರೈಲ್ವೆ ಉದ್ಯೋಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ವೃದ್ಧ ಸಾವನ್ನಪ್ಪಿದ್ದರು. ಮೃತ ವೃದ್ಧನ ಪತ್ನಿಗೂ ಸೋಂಕು ತಗುಲಿದೆ. ನಾಲ್ವರು ಮಕ್ಕಳಲ್ಲಿ ಮೂವರಿಗೂ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಆರೋಗ್ಯವಾಗಿದ್ದ ಮಗನಿಗೆ ಆಸ್ಪತ್ರೆ ಸಿಬ್ಬಂದಿ ಫೋನ್ ಮಾಡಿ ಸಾವಿನ ವಿಷಯ ತಿಳಿಸಿದ್ದಾರೆ.
Advertisement
Advertisement
ಶವ ತೆಗೆದುಕೊಂಡು ನನ್ನೊಂದಿಗೆ ಯಾರು ಇಲ್ಲ ಎಂದು ಹೇಳಿ ಮಗ ಮೊಬೈಲ್ ಸ್ವಿಚ್ಛ್ ಆಫ್ ಮಾಡಿದ್ದಾನೆ. ಶವ ಪಡೆಯಲು ಕುಟುಂಬಸ್ಥರು ಮುಂದಾಗದಿದ್ದಾಗ ಆಸ್ಪತ್ರೆ ಸಿಬ್ಬಂದಿ ಕಬೀರ್ ಸೇವಾ ಸಂಸ್ಥಾನ ಸಂಘಟನೆಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಸಂಸ್ಥಾನದ ಯುವಕ ಮೊಹಮ್ಮದ್ ಉಮರ್ ಶವ ಪಡೆದು, ಕೊರೊನ ನಿಯಮಗಳನ್ನು ಪಾಲಿಸಿ ಅಂತ್ಯಸಂಸ್ಕಾರ ನಡೆಸಿದ್ದಾರೆ. ಹಿಂದೂ ಸಂಪ್ರದಾಯದಂತೆಯೇ ಅಂತಿಮ ವಿಧಿ ವಿಧಾನಗಳನ್ನ ಪೂರೈಸಲಾಗಿದೆ.
Advertisement
ಅಂತಿಮ ಸಂಸ್ಕಾರದ ಬಳಿಕ ಮೊಹಮ್ಮದ್ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಮಾನವ ಧರ್ಮ ಉಳುವಿಕೆಗಾಗಿ ನಾನು ಈ ಕಾರ್ಯ ಮಾಡಿದ್ದೇನೆ. ಮುಂಜಾಗೃತವಾಗಿ ಕ್ವಾರಂಟೈನ್ ನಲ್ಲಿರೋದಾಗಿ ಮೊಹಮ್ಮದ್ ತಿಳಿಸಿದ್ದಾರೆ.