ಹಾವೇರಿ: ಕೊರೊನಾ ಸೋಂಕಿನಿಂದ ಮೃತಪಟ್ಟ ಸೋಂಕಿತ ಮಹಿಳೆಯರಿಬ್ಬರ ಶವ ಅದಲು ಬದಲು ಮಾಡಿ ಶವಾಗಾರದ ಸಿಬ್ಬಂದಿ ಆವಾಂತರ ಸೃಷ್ಟಿಸಿದ ಘಟನೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
Advertisement
ಕಳೆದ ರಾತ್ರಿ ಮೃತಪಟ್ಟಿದ್ದ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ನೇಶ್ವಿ ಗ್ರಾಮದ ಮಹಿಳೆ ಗದಿಗೆವ್ವರ ಮೃತದೇಹವನ್ನು, ಇದೇ ಜಿಲ್ಲೆಯ ಆಲದಕಟ್ಟಿ ಗ್ರಾಮದ ಮೃತ ರೋಜಾನಬಿ ಕುಟುಂಬಕ್ಕೆ ನೀಡಿ. ರೋಜಾನಬಿ ಅವರ ಮೃತದೇಹವನ್ನು ಗದಿಗೆವ್ವಳ ಕುಟುಂಬಸ್ಥರಿಗೆ ನೀಡಿ ಜಿಲ್ಲಾಸ್ಪತ್ರೆಯ ಶವಾಗಾರದ ಸಿಬ್ಬಂದಿ ಪೇಚಿಗೆ ಸಿಲುಕಿದ್ದಾರೆ.
Advertisement
ಗದಿಗೆವ್ವ ಮುಖವನ್ನು ಕೊನೆಯ ಬಾರಿ ನೋಡಲು ಮಕ್ಕಳು ತೆರಳಿದಾಗ ಈ ಎಡವಟ್ಟು ಬೆಳಕಿಗೆ ಬಂದಿದ್ದು. ಅಷ್ಟೊತ್ತಿಗಾಗಲೇ ಆಲದಕಟ್ಟಿಯ ಗ್ರಾಮದ ಮಹಿಳೆಯ ಸಂಬಂಧಿಕರು ರೋಜಾನಬಿ ಮೃತದೇಹವೆಂದು ಗದಿಗೆವ್ವಳ ಮೃತದೇಹವನ್ನು ದಫನ್ ಮಾಡಿದ್ದಾರೆ. ಇದರಿಂದ ಹೆತ್ತವ್ವಳ ಮುಖ ಕೊನೆಯ ಬಾರಿಗೆ ನೋಡಲಾಗದೆ ಗದಿಗೆವ್ವಳ ಮಕ್ಕಳು ಶವಾಗಾರದ ಮುಂದೆ ಕಣ್ಣೀರು ಹಾಕಿದ್ದಾರೆ.
Advertisement
Advertisement
ಬಳಿಕ ನಾವು ನಮ್ಮ ತಾಯಿಯ ಮುಖ ನೋಡಲೇ ಬೇಕು. ತಾಯಿಯ ಶವವನ್ನು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ನಮಗೆ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಅದರೆ ಆಲದಕಟ್ಟಿ ಗ್ರಾಮದ ಜನರು ಕೊರೊನಾ ಸೋಂಕಿನಿಂದ ಮೃತಪಟ್ಟು ಅಂತ್ಯಕ್ರಿಯೆ ಮಾಡಿದ ಶವವನ್ನು ಮತ್ತೆ ತೆಗೆಯಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟುಹಿಡಿದ್ದಾರೆ.