ಮಂಡ್ಯ: ಕೊರೊನಾದಿಂದ ಇಡೀ ಗ್ರಾಮ ಸೀಲ್‍ಡೌನ್ ಆಗಿರುವ ಕಾರಣ ರೈತರು ಬೆಳೆದ ಸುನಾಮಿ ಸೌತೆಕಾಯಿ ಮಣ್ಣು ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಜರುಗಿದೆ.
Advertisement
ಕ್ಯಾತನಹಳ್ಳಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮಂದಿಗೆ ಕೊರೊನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಇದೇ ಗ್ರಾಮ ರೈತ ಕುಮಾರ್ ಸಾವಿರಾರು ರೂಪಾಯಿ ಬಂಡವಾಳ ಹಾಕಿ ಸುನಾಮಿ ಸೌತೆಕಾಯಿಯನ್ನು ಬೆಳೆದಿದ್ದರು. ಇದೀಗೆ ಸಮೃದ್ಧಿಯಾಗಿ ಬಂದಿರುವ ಬೆಳೆಯನ್ನು ಕಟಾವು ಮಾಡಿಸಲಾಗದೇ ಬೆಳೆದ ಬೆಳೆಯಲ್ಲಾ ಮಣ್ಣು ಪಾಲಾಗುತ್ತಿದೆ.
Advertisement
Advertisement
ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿ ಇದ್ದ ಕುಮಾರ್ ಇದೀಗ ಕೊರೊನಾದ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ತಾವು ಹಾಕಿದ ಬಂಡವಾಳವು ಕೈ ಸೇರಲಿಲ್ಲ ಎಂದು ನಿರಾಸೆ ಅನುಭವಿಸುತ್ತಿದ್ದಾರೆ. ಸರ್ಕಾರ ನನ್ನ ನೆರವಿಗೆ ಬರಬೇಕೆಂದು ಕುಮಾರ್ ಮನವಿ ಮಾಡಿಕೊಳ್ಳುತ್ತಿದ್ದಾರೆ.
Advertisement