ನವದೆಹಲಿ: ಫ್ರಂಟ್‍ಲೈನ್ ನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವ ವೈದ್ಯನನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ. ಶನಿವಾರ ರಾತ್ರಿ ವೈದ್ಯ ಜೋಗಿಂದರ್ ಚೌಧರಿ ನಿಧನರಾಗಿದ್ದು, ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಇವರನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನೇಮಿಸಲಾಗಿತ್ತು.
ಜೂನ್ 27ರಂದು ಚೌಧರಿ ಅವರಿಗೆ ಸೋಂಕು ತಗುಲಿದ್ದು ದೃಢವಾಗಿತ್ತು. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮೊದಲಿಗೆ ದೆಹಲಿಯ ಲೋಕ್ ನಾಯಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಗಂಗಾರಾಮ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚೌಧರಿ ಕುಟುಂಬಸ್ಥರು ಚಿಕಿತ್ಸೆಗಾಗಿ 3.4 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಇತ್ತ ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯರು ತಮ್ಮ ಅಸೋಸಿಯೇಶನ್ ನಿಂದ ಚಿಕಿತ್ಸೆಗೆ 2.4 ಲಕ್ಷ ರೂ. ಧನ ಸಹಾಯ ಮಾಡಿದ್ದರು.
Advertisement
Advertisement
ಚೌಧರಿ ಅವರ ತಂದೆ ರೈತರಾಗಿದ್ದು, ಮಗನ ಚಿಕಿತ್ಸೆಗೆ ನೆರವಾಗುವಂತೆ ಆಸ್ಪತ್ರೆ ಮಂಡಳಿಗೆ ಪತ್ರ ಬರೆದಿದ್ದರು. ಅಂಬೇಡ್ಕರ್ ಆಸ್ಪತ್ರೆ ಸಹ ಚೌಧರಿ ಚಿಕಿತ್ಸಾ ವೆಚ್ಚಕ್ಕೆ ವಿನಾಯ್ತಿ ನೀಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಚೌಧರಿ ತಂದೆಯ ಪತ್ರಕ್ಕೆ ಸ್ಪಂದಿಸಿದ್ದ ಆಸ್ಪತ್ರೆ ಮಂಡಳಿ ಪೂರ್ಣ ಚಿಕಿತ್ಸೆ ವೆಚ್ಚ ಭರಿಸಲು ಮುಂದಾಗಿತ್ತು.
Advertisement
ಡಾಕ್ಟರ್ ಚೌಧರಿ ಮಧ್ಯಪ್ರದೇಶದ ಸಿಂಗರೌಲಿಯ ಮೂಲದವರಾಗಿದ್ದು, 2019 ನವೆಂಬರ್ ನಲ್ಲಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು.
Advertisement
ಕಳೆದ ವಾರ ದೆಹಲಿಯ 42 ವರ್ಷದ ಡಾ.ಜಾವೇದ್ ಅಲಿ ಸಹ ಕೊರೊನಾದಿಂದಾಗಿ ಮೃತಪಟ್ಟಿದ್ದರು. ಜಾವೇದ್ ಮೂರು ತಿಂಗಳಿನಿಂದ ರಜೆ ಪಡೆಯದೇ ಸೋಂಕಿತರ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಜಾವೇದ್ ಅಲಿ ನಿಧನದ ಕೇಜ್ರಿವಾಲ್ ಸರ್ಕಾರ ಕುಟುಂಬಕ್ಕೆ 1 ಕೋಟಿ ರೂ. ನೀಡುವದಾಗಿ ಘೋಷಿಸಿದೆ.