– ಸೂಕ್ತ ಸೌಲಭ್ಯ ಕಲ್ಪಿಸುವಂತೆ ಚಾಲಕರ ಮನವಿ
ಬೆಂಗಳೂರು: ಮಹಾಮಾರಿ ಕೊರೊನಾಗೆ ವಾರಿಯರ್ಸ್‍ಗಳೂ ನಲುಗಿ ಹೋಗಿದ್ದು, ಇದೀಗ 108 ಅಂಬುಲೆನ್ಸ್ ಚಾಲಕ ಸಾವನ್ನಪ್ಪಿದ್ದಾರೆ. ಚಾಲಕನ ಸಾವಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.
Advertisement
ಕೊರೊನಾ ಸಮಯದಲ್ಲಿ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ ಚಾಲಕ ಜಗದೀಶ್ ಇಂದು ಸಾವನ್ನಪ್ಪಿದ್ದಾರೆ. ಮೃತ ಜಗದೀಶ್ ಅಗಲಿಕೆಗೆ 108 ವಾಹನ ಚಾಲಕರು ಕಂಬನಿ ಮಿಡಿದಿದ್ದಾರೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಚಾಲಕ ಬಲಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸ್ತಿದ್ದ ಜಗದೀಶ್, ಸೋಂಕಿನಿಂದ ಮೃತಪಟ್ಟಿದ್ದಾರೆ.
Advertisement
ಕೋವಿಡ್ ಸಮಯದಲ್ಲಿ ಚಾಲಕರಿಗೆ ಕೊಡಬೇಕಾದ ಮುನ್ನೆಚ್ಚರಿಕೆ ಸಲಕರಣೆಗಳನ್ನ ಕೊಟ್ಟಿಲ್ಲ. ಹೀಗಾಗಿ ಕೊರೊನಾ ಪಾಸಿಟಿವ್ ರೋಗಿಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವ ಸಮಯದಲ್ಲಿ ಸೋಂಕು ತಗುಲಿದೆ.ಬೆಂಗಳೂರಿನಲ್ಲಿ ಸಹ ಇದೇ ರೀತಿ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಕುರಿತು ಸರ್ಕಾರಕ್ಕೆ ಹಲವು ಬಾರಿ ಮನವಿ ಸಹ ಮಾಡಲಾಗಿತ್ತು, ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಸಾವು ಸಂಭವಿಸುತ್ತಿವೆ.
Advertisement
Advertisement
ಜೀವವನ್ನು ಪಣಕ್ಕಿಟ್ಟು ದುಡಿಯುವ ಚಾಲಕರ ಜೀವಕ್ಕೆ ಬೆಲೆ ಇಲ್ಲವೆ, ಆರೋಗ್ಯ ಸಚಿವರು ಈ ಕುರಿತು ಗಮನಹರಿಸಬೇಕು. ನಮ್ಮ ಪಾಡು, ತೀರ ದಯನೀಯ ಸ್ಥಿತಿ ತಲುಪಿದೆ. ಮಾಸ್ಕ್ ಇಲ್ಲ, ಕಿಟ್ ಇಲ್ಲ. ಹೀಗಾಗಿ ನಮ್ಮ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ಮೃತ ಜಗದೀಶ್ ಕುಟುಂಬಕ್ಕೆ ಪರಿಹಾರ ನೀಡಿ, ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಕೊರೊನಾ ಹೊಡೆತಕ್ಕೆ ಸಹಸ್ರಾರು ಕುಟುಂಬಗಳು ಬೀದಿ ಪಾಲಾಗುತ್ತಿವೆ ಎಂದು 108 ಅಂಬುಲೆನ್ಸ್ ರಾಜ್ಯ ಚಾಲಕರ ಸಂಘದ ಉಪಾಧ್ಯಕ್ಷ ಸೇರಿ 3 ಸಾವಿರ ಚಾಲಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.