ಬೆಂಗಳೂರು: ಕೊರೊನಾ ವಾರಿಯರ್ ಆಗಿದ್ದ ಮೈಸೂರಿನ ವೈದ್ಯ ಡಾ. ಚಂದ್ರ ಕುಮಾರ್ ಕೋವಿಡ್ 19ಗೆ ಬಲಿಯಾಗಿದ್ದಾರೆ.
ಚಂದ್ರ ಕುಮಾರ್ ಮೃತಪಟ್ಟಿದ್ದಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ, ಚಂದ್ರ ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
Advertisement
2/2
ರೋಗಿಗಳ ಕಾಳಜಿ ಜೊತೆಗೆ ತಮ್ಮ ಸುರಕ್ಷೆಯ ಕಡೆಗೂ ಗಮನ ನೀಡುವುದು ಅತ್ಯಗತ್ಯವಾಗಿದೆ. ಹಾಗಾಗಿ ಎಲ್ಲಾ ವೈದ್ಯ ಸಿಬ್ಬಂದಿ ಎಚ್ಚರವಹಿಸಲು ಕೋರುತ್ತೇನೆ.
ಚಂದ್ರ ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.#KarnatakaFightsCoron
— B Sriramulu (@sriramulubjp) August 1, 2020
Advertisement
ಚಂದ್ರ ಕುಮಾರ್ ಅವರು ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವುದು ದುಃಖಕರ. ರಾಜ್ಯದಲ್ಲಿ ಕೊರೊನ ಸೋಂಕಿನ ಚಿಕಿತ್ಸಾ ಕಾರ್ಯದಲ್ಲಿ ನೂರಾರು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ವೈದ್ಯಕೀಯ ಸಿಬ್ಬಂದಿಯು ರೋಗಿಗಳ ಕಾಳಜಿ ಜೊತೆಗೆ ತಮ್ಮ ಸುರಕ್ಷೆಯ ಕಡೆಗೂ ಗಮನ ನೀಡುವುದು ಅತ್ಯಗತ್ಯವಾಗಿದೆ. ಹಾಗಾಗಿ ಎಲ್ಲಾ ವೈದ್ಯ ಸಿಬ್ಬಂದಿ ಎಚ್ಚರವಹಿಸಲು ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.