-ಕೊರೊನಾ ಗೆದ್ದ ಪೊಲೀಸರಿಗೆ ಐಜಿಪಿ ಶುಭ ಹಾರೈಕೆ
ಉಡುಪಿ: ಮಹಾಮಾರಿ ಕೊರೊನಾ ಸಾರ್ವಜನಿಕರಿಗೆ ಅಂಟಿದಂತೆ ಉಡುಪಿ ಜಿಲ್ಲೆಯ ನಾಲ್ವರು ಪೊಲೀಸರಿಗೂ ಆವರಿಸಿತ್ತು. ಉಡುಪಿ ಜಿಲ್ಲೆಯ ಚೆಕ್ ಪೋಸ್ಟ್ ಮತ್ತು ಕ್ವಾರಂಟೈನ್ ಸೆಂಟರ್ ನಲ್ಲಿ ಕೆಲಸ ಮಾಡಿದ್ದ ನಾಲ್ಕು ಮಂದಿ ಪೊಲೀಸರು ಕೊರೊನಾಗೆ ತುತ್ತಾಗಿದ್ದರು. ನಾಲ್ವರೂ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.
ಎಲ್ಲಾ ನಾಲ್ವರು ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಾಲ್ವರು ಪೊಲೀಸರು ಕೂಡ ಸೋಂಕಿನಿಂದ ಸದ್ಯ ಮುಕ್ತರಾಗಿದ್ದಾರೆ. ನಾಲ್ವರು ಡಿಸ್ಚಾರ್ಜ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿರಾಯ್ ಉಡುಪಿ ಟಿಎಂಎ ಪೈ ಆಸ್ಪತ್ರೆಗೆ ಭೇಟಿ ಕೊಟ್ಟು ಡಿಸ್ಚಾರ್ಜ್ ಆಗುವ ನಾಲ್ಕು ಮಂದಿ ಪೊಲೀಸರಿಗೆ ಹೂಗುಚ್ಛ ಕೊಟ್ಟು ಶುಭ ಹಾರೈಸಿದರು.
Advertisement
Advertisement
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೊಲೀಸರಲ್ಲಿ ಕೊರೊನಾ ಕಾಣಿಸಿಕೊಳ್ಳುವುದು ಸಾಮಾನ್ಯ. ಮುಂದೆಯೂ ಬರಬಹುದು. ಎದೆಗುಂದದೆ ಕೆಲಸ ಮಾಡುತ್ತೇವೆ. ಪಶ್ಚಿಮ ವಲಯದ ಎಲ್ಲಾ ಠಾಣೆಗಳ ಸ್ಯಾನಿಟೈಜ್ ಮಾಡುತ್ತೇವೆ ಎಂದರು.
Advertisement
ಕೊರೊನಾ ಪೀಡಿತರ ಜೊತೆ ಪೊಲೀಸರು ಬಹಳ ಹತ್ತಿರದಿಂದ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಚೆಕ್ ಪೋಸ್ಟ್ ಆಗಿರಲಿ, ಕ್ವಾರಂಟೈನ್ ಸೆಂಟರ್ ಆಗಿರಲಿ ಎಲ್ಲಾ ಕಡೆ ಬಹಳ ಕ್ಲೋಸ್ ಕಾಂಟ್ಯಾಕ್ಟ್ ನಲ್ಲಿ ಬಂದಿದ್ದರು. ಜಿಲ್ಲೆಯ ನಾಲ್ಕು ಮಂದಿಗೆ ಕೊರೊನಾ ಪಾಸಿಟಿವ್ ಬಾಧಿಸಿತ್ತು. ಎಲ್ಲರಿಗೂ ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ. ಕೊರೊನಾಕ್ಕೆ ಬೆದರಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಕರ್ತವ್ಯ ನಿರಂತರವಾಗಿ ಮುಂದುವರಿಯುತ್ತಿರುತ್ತದೆ. ನಮ್ಮ ಆರೋಗ್ಯ ತಪಾಸಣೆಯನ್ನು ಕೂಡ ಜೊತೆಜೊತೆಗೆ ನಡೆಸುತ್ತೇವೆ ಎಂದು ಅವರು ಹೇಳಿದರು.
Advertisement
ನಾಲ್ವರು ಪೊಲೀಸರ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಒಳಗಾದವರನ್ನು ಕೂಡ ಗಂಟಲ ದ್ರವ ತೆಗೆದು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಈ ವರದಿಗಳು ಕೂಡ ಬರಲಿಕ್ಕಿದೆ. ನೂರಕ್ಕೂ ಹೆಚ್ಚು ಮಂದಿ ಈಗಾಗಲೇ ಪೊಲೀಸರು ಕ್ವಾರಂಟೈನ್ ನಲ್ಲಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡಿದವರು ಎಲ್ಲರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದೇವೆ. ಅವರ ಪ್ರಥಮ ಮತ್ತು ದ್ವಿತೀಯ ಕಾಂಟಾಕ್ಟ್ ನ ಟೆಸ್ಟ್ ಗಳು ಕೂಡ ಆಗಿದೆ. ಈಗಾಗಲೇ ಪಾಸಿಟಿವ್ ಬಂದ ಪೊಲೀಸ್ ಸಿಬ್ಬಂದಿ ಕೆಲಸ ಮಾಡಿದ ಠಾಣೆಗಳನ್ನು ಸ್ಯಾನಿಟೈಸರ್ ಮಾಡಲಾಗಿದೆ. ಪಶ್ಚಿಮ ವಲಯಕ್ಕೆ ಬರುವ ಎಲ್ಲಾ ಠಾಣೆಗಳನ್ನು ಕೂಡ ಸ್ಯಾನಿಟೈಸ್ ಮಾಡ್ತೇವೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಕೊರೊನಾ ವಾರಿಯರ್ ಗಳ ರೀತಿಯಲ್ಲಿ ಪೊಲೀಸರು ಕೆಲಸ ಮಾಡುವುದರಿಂದ ಮುಂದೆ ಕೂಡ ಪೊಲೀಸರಿಗೆ ಹೆಚ್ಚು ಪಾಸಿಟಿವ್ ಬರುವ ಸಾಧ್ಯತೆ ಇದೆ. ನಾವು ಎಲ್ಲದಕ್ಕೂ ಸನ್ನದ್ಧರಾಗಿದ್ದೇವೆ. ನಮ್ಮ ಪೊಲೀಸ್ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದರು.