– ಎಲ್ಲರೂ ಆರೋಗ್ಯವಾಗಿದ್ದಾರೆ ಅಂದ್ರು ಡಿಹೆಚ್‍ಓ
ಕೊಪ್ಪಳ: ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಲಾಗಿದೆ ಎಂದು ಡಿ.ಎಚ್.ಓ ಟಿ ಲಿಂಗರಾಜ್ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ 100ಕ್ಕೂ ಹೆಚ್ಚು ಗರ್ಭಿಣಿಯರಿಗೆ ಪಾಸಿಟಿವ್ ಆಗಿತ್ತು. ಕೊಪ್ಪಳ ತಾಲೂಕು 33, ಯಲಬುರ್ಗಾ ತಾಲೂಕು 45, ಕುಷ್ಟಗಿ ತಾಲೂಕು 12 ಹಾಗೂ ಗಂಗಾವತಿ ತಾಲೂಕಿನಲ್ಲಿ 32 ಗರ್ಭಿಣಿಯರಲ್ಲಿ ಸೋಂಕು ಕಾಣಿಸಿಕೊಂಡಿತ್ತು.
80 ಕ್ಕೂ ಹೆಚ್ಚು ಜನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ರು. ಇದರಲ್ಲಿ 54 ಜನರ ಹೆರಿಗೆಯನ್ನ ಯಶಸ್ವಿಯಾಗಿ ಮಾಡಲಾಗಿದೆ. ಇದರಲ್ಲಿ 26 ಜನರಿಗೆ ನಾರ್ಮಲ್ ಡೆಲಿವರಿ, 28 ಸಿಜೇರಿಯನ್ ಮಾಡಿದ್ದು, ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ. ಇದು ಸಂತಸದ ವಿಷಯ ಎಂದು ಡಿಹೆಚ್‍ಓ ಹೆರಿಗೆ ವಿಭಾಗದ ಮುಖ್ಯಸ್ಥರಿಗೆ ಧನ್ಯವಾದ ಸಲ್ಲಿಸಿದರು.
ಹೆರಿಗೆಯಾದ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ಆದರೆ ಬೇರೆ ಬೇರೆ ಜಿಲ್ಲೆಯಲ್ಲಿ ಹೆರಿಗೆಯಾದ ಬಳಿಕ ಐದು ಜನರಿಗೆ ಪಾಸಿಟಿವ್ ಆಗಿದೆ. ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಂತಹ ಮಕ್ಕಳಿಗೆ ವಿಶೇಷ ನವಜಾತ ಶಿಶು ತೀವ್ರ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲೂ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಡಿ.ಚ್‍ಓ ಮಾಹಿತಿ ನೀಡಿದರು.