ಕೊಪ್ಪಳದಲ್ಲಿ ಇಬ್ಬರು ಸೋಂಕಿತರು ಗುಣಮುಖ, ಡಿಸ್ಚಾರ್ಜ್

Public TV
1 Min Read
KPL CORONA

ಕೊಪ್ಪಳ: ಕೋವಿಡ್-19 ಸೋಂಕಿನಿಂದ ಗುಣಮುಖರಾಗಿರುವ ಕೊಪ್ಪಳ ಜಿಲ್ಲೆಯ ಇಬ್ಬರನ್ನು ಇಂದು ಜಿಲ್ಲಾ ಆಸ್ಪತ್ರೆಯಿಂದ ಆರೋಗ್ಯ ಇಲಾಖೆಯ ತಂಡದಿಂದ ಚಪ್ಪಾಳೆ ತಟ್ಟುವುದರ ಮೂಲಕ ಬಿಡುಗಡೆ ಮಾಡಲಾಯಿತು.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಶಸ್ತ್ರ ಚಿಕಿತ್ಸಕಾ ಎಸ್.ಬಿ ದಾನ್‍ರೆಡ್ಡಿ, ರೋಗಿ-1174 20 ವರ್ಷದ ಮಹಿಳೆ ಮಹಾರಾಷ್ಟ್ರದಿಂದ ಹಾಗೂ ರೋಗಿ-1175 25 ವರ್ಷದ ಪುರುಷ ಚೆನ್ನೈನಿಂದ ಜಿಲ್ಲೆಗೆ ಆಗಮಿಸಿದ ಕಾರಣ ಇವರಿಬ್ಬರನ್ನು ಕ್ವಾರಂಟೈನ್‍ಗೆ ಒಳಪಡಿಸಿ ಮೇ.15 ರಂದು ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಇವರಿಗೆ 14 ದಿನಗಳ ಕಾಲ ಜಿಲ್ಲಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಿ, ಮೇ.27 ರಂದು ಮತ್ತೊಮ್ಮೆ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

KPL CORONA a

ರೋಗಿ-1174 ಮತ್ತು ರೋಗಿ-1175 ಕೋವಿಡ್-19 ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ಇಬ್ಬರು ತಮ್ಮ ಮನೆಗಳಿಗೆ ತೆರಳಿದ ನಂತರ 14 ದಿನ ಹೋಂ ಕ್ವಾರಂಟೈನ್‍ನಲ್ಲಿ ಇದ್ದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಲ್ಲದೆ ಈ ಇಬ್ಬರು ವ್ಯಕ್ತಿಗಳಿಗೆ ಆಯುಷ್ ಇಲಾಖೆಯಿಂದ ಆರ್ಯುವೇದಿಕ್ ಔಷಧಿಗಳನ್ನು ನೀಡಲಾಗಿದೆ. ಗುಣಮುಖರಾದವರಿಂದ ಸಾರ್ವಜನಿಕರು ಯಾವುದೇ ರೀತಿಯ ಕೀಳರಿಮೆಯಿಂದ ಕಾಣುವುದು ಮಾಡಬಾರದು ಎಂದು ವೈದರು ತಿಳಿಸಿದಾರೆ.

ಜಿಲ್ಲೆಯಲ್ಲಿ 20 ಜನರಲ್ಲಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರ ಗಂಟಲು ದ್ರವವನ್ನು ಸಂಗ್ರಹಿಸಿ ಮೂರು ಬಾರಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ಮೂರು ಪರೀಕ್ಷೆಗಳಲ್ಲಿನ ವರದಿ ನೆಗೆಟಿವ್ ವರದಿ ಬಂದರೆ ಮಾತ್ರ ಅವರನ್ನು ಮನೆಗೆ ಕಳುಹಿಸಲಾಗುತ್ತದೆ. 20 ಪ್ರಕರಣಗಳ ಪೈಕಿ 4 ವ್ಯಕ್ತಿಗಳು ಗುಣಮುಖರಾಗಿದ್ದು, 16 ವ್ಯಕ್ತಿಗಳ ವರದಿಯು ಬಾಕಿ ಉಳಿದಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ನೆಗಡಿ, ಕೆಮ್ಮು, ಜ್ವರಗಳಿಗೆ ಜಿಲ್ಲೆಯ ಎರಡು ಸ್ಥಳಗಳಲ್ಲಿ ಫಿವರ್ ಕ್ಲಿನಿಕ್‍ಗಳನ್ನು ತೆರೆಯಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *